ಮೈಸೂರು: ದೇಶದ ಜನರ ರಕ್ತದ ಮೇಲೆ ಅಧಿಕಾರ ಹಿಡಿಯುವುದು ಬಿಜೆಪಿಯ ಚಟವಾಗಿದೆ ಎಂದು ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ಕಿಡಿಕಾರಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ದೇಶದ ಜನರ ರಕ್ತದ ಮೇಲೆ ಅಧಿಕಾರ ಹಿಡಿಯುವುದು ಬಿಜೆಪಿಯ ಚಟವಾಗಿದೆ.
ಪಹಲ್ಗಾಮ್‌ನಲ್ಲಿ ಮುಸ್ಲಿಮರೇ ಬಹಳಷ್ಟು ಜನರನ್ನು ಕಾಪಾಡಿದ್ದಾರೆ. ಧರ್ಮದ ಹೆಸರು ಕೇಳಿ ಯಾರನ್ನೂ ಅಲ್ಲಿ ಕೊಂದಿಲ್ಲ. ಸುಮ್ಮನೆ ಮುಸ್ಲಿಮರು, ಮುಸ್ಲಿಮರು ಎಂದು ಬಿಜೆಪಿ ಅಪಪ್ರಚಾರ ಮಾಡುತ್ತಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಘಟನೆ ನಡೆದ ದಿನ ಅಲ್ಲಿ ಸೇನೆ ಮತ್ತು ಪೊಲೀಸ್ ಯಾಕೆ ಇರಲಿಲ್ಲ. ಇದರ ಹಿಂದೆ ಬೇರೆ ಏನೋ ಉದ್ದೇಶವಿದೆ. ಈ ಬಗ್ಗೆ ಅಂತಾರಾಷ್ಟ್ರೀಯ ಏಜೆನ್ಸಿ ಮೂಲಕ ತನಿಖೆ ಆಗಬೇಕು. ಹಿಂದೂ, ಮುಸ್ಲಿಮರ ನಡುವೆ ಕಂದಕ ಉಂಟು ಮಾಡಿ ಚುನಾವಣೆ ಗೆಲ್ಲುವುದೇ ಬಿಜೆಪಿಯ ಉದ್ದೇಶ. ಮುಸ್ಲಿಮರೆಲ್ಲಾ ಭಯೋತ್ಪಾದಕರು ಎಂದು ಬಿಂಬಿಸುವ ಕೆಲಸ ಶುರುವಾಗಿದೆ ಎಂದರು.



