HomeGadag Newsಬಲಿದಾನ ದಿನದ ಅಂಗವಾಗಿ ರಕ್ತದಾನ ಶಿಬಿರ

ಬಲಿದಾನ ದಿನದ ಅಂಗವಾಗಿ ರಕ್ತದಾನ ಶಿಬಿರ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ಇಲ್ಲಿನ ಹರ್ತಿ ಗ್ರಾಮದಲ್ಲಿ ಹರ್ತಿ ಶ್ರೀ ಪಾರ್ವತಿ-ಪರಮೇಶ್ವರ ದೇವಸ್ಥಾನದಲ್ಲಿ ಶ್ರೀರಾಮ ಸೇನಾ ತಾಲೂಕು ಘಟಕ, ಗದಗ ಬ್ಲಡ್ ಡೋರ‍್ಸ್ ಸೊಸೈಟಿ, ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಕೇಂದ್ರ, ಶ್ರೀರಾಮ ಸೇನಾ ಹರ್ತಿ ಗ್ರಾಮ ಘಟಕದ ವತಿಯಿಂದ ಕ್ರಾಂತಿಕಾರಿ ಹೋರಾಟಗಾರರಾದ ಭಗತ್‌ಸಿಂಗ್, ರಾಜಗುರು, ಸುಖದೇವರ 94ನೇ ಬಲಿದಾನ ದಿನೋತ್ಸವ ಆಚರಣೆಯ ಅಂಗವಾಗಿ ರಕ್ತದಾನ ಶಿಬಿರ ಆಯೋಜಿಲಾಗಿತ್ತು.

ಶಿಬಿರವನ್ನು ಶ್ರೀರಾಮ ಸೇನಾ ರಾಜ್ಯ ಸಂಚಾಲಕ ರಾಜು ಖಾನಪ್ಪನವರ ಉದ್ಘಾಟಿಸಿ, ಕ್ರಾಂತಿಕಾರಿ ಬದುಕು ನಮಗೆ ಪ್ರೇರಣೆಯಾಗಿದೆ ಎಂದರು. ಶಿಬಿರದಲ್ಲಿ 35ಕ್ಕೂ ಹೆಚ್ಚು ಕಾರ್ಯಕರ್ತರು ರಕ್ತದಾನ ಮಾಡಿದರು. ಇದೇ ಸಂದರ್ಭದಲ್ಲಿ 2024ನೇ ಸಾಲಿನ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವ ಅಂಗವಾಗಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ನಡೆದ ಚಿತ್ರಕಲೆ ಹಾಗೂ ರಂಗೋಲಿ ಸ್ವರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಶ್ರೀರಾಮ ಸೇನಾ ಜಿಲ್ಲಾಧ್ಯಕ್ಷ ಸೋಮ ಗುಡಿ, ಗದಗ ತಾಲೂಕಾಧ್ಯಕ್ಷ ಭರತ ಲದ್ದಿ, ಕಾರ್ಯಕರ್ತರಾದ ಮಂಜುನಾಥ ಬಂಡಿವಡ್ಡರ, ಮನೋಜ್ ಕುಮಾರ್ ಲದ್ದಿ, ಪರಮೇಶ್ ಬೆಂತೂರು, ಮಂಜು ನವಲಿ, ಶ್ರೀನಿವಾಸ್ ರಡ್ಡೇರ, ಸಚಿನ್ ಸೋಮನಕಟ್ಟಿ, ರವಿ ಬಂಡಿವಡ್ಡರ, ಮಹೇಶ್ ಹಡಪದ, ಸಂಜೀವ ಸೋಮರೆಡ್ಡಿ, ಆನಂದ ಹುಡೇದ, ದೇವಪ್ಪ ಕುರ್ತಕೋಟಿ, ದೇವರಾಜ ನವಲಿ, ಸದಾನಂದ ಬೆಂತೂರ, ನಾಗರಾಜ ಅಸುಂಡಿ, ಬುದೇಶ ಹಡಪದ, ಮಾಂತೇಶ ಹೊಣ್ಣಪ್ಪನವರ ಆನಂದ ಕೂಡ್ಲಿಂಗಣ್ಣವರ, ಅಜಿತ ಲದ್ದಿ, ಶಿವು ಲದ್ದಿ, ಪದ್ಮರಾಜ ದೇಸಾಯಿ, ಪಾರ್ಶ್ವನಾಥ ಪುಟ್ಟಣ್ಣವರ, ಈಶ್ವರ ಕಮ್ಮಾರ, ಚಂದ್ರಶೇಖರ ಹುಡೇದ, ಕಿರಣ್ ಮುಳ್ಳಾಳ, ಗಿರೀಶ್ ಯಬಿಸೂರ್ ಮುಂತಾದವರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img