ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ತಾಲೂಕಿನ ಬಾಳೇಹೊಸೂರ ಗ್ರಾಮದಲ್ಲಿ ಎ.18 ಮತ್ತು 19ರಂದು ನಡೆಯುವ ಶ್ರೀ ದಿಂಗಾಲೇಶ್ವರಮಠದ ಜಾತ್ರಾ ಮಹೋತ್ಸವದ ಅಂಗವಾಗಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ.
Advertisement
ಗ್ರಾಮದ ಸರ್ಕಾರಿ ಕಿರಿಯ ಹೆಣ್ಣು ಮಕ್ಕಳ ಶಾಲೆಯಲ್ಲಿ ಧಾರವಾಡದ ರೋಟರಿ ಬ್ಲಡ್ ಬ್ಯಾಂಕ್, ಗ್ರಾಮಸ್ಥರು, ವಿವಿಧ ಸಂಘಟನೆಗಳ ಸಹಯೋಗದಲ್ಲಿ ರಕ್ತದಾನ ಶಿಬಿರ ನಡೆಯಲಿದೆ. ಗ್ರಾಮಸ್ಥರು, ಶ್ರೀಮಠದ ಭಕ್ತರು, ಯುವಕರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿ ಮತ್ತು ಮಾಡಲು ಪ್ರೇರೇಪಿಸಿ ಎಂದು ಶ್ರೀ ಮಠ ಮತ್ತು ಶಿರಹಟ್ಟಿ ಭಾವೈಕ್ಯತಾ ಸಂಸ್ಥಾನಮಠ ಶ್ರೀ ಫಕೀರ ದಿಂಗಾಲೇಶ್ವರ ಜಗದ್ಗುರುಗಳು ತಿಳಿಸಿದ್ದಾರೆ.