ಬೆಂಗಳೂರು:- ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಬಿಎಂಟಿಸಿ ಚಾಲಕನ ಯಡವಟ್ಟು ದೊಡ್ಡ ಅವಘಡಕ್ಕೆ ಕಾರಣವಾಯಿತು.
Advertisement
ಏಕಾಏಕಿ ನಿಯಂತ್ರಣ ತಪ್ಪಿದ ಬಿಎಂಟಿಸಿ ಬಸ್, 9ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ ಹೊಡೆದ ಘಟನೆ ಭಯಾನಕ ಪರಿಸ್ಥಿತಿ ಉಂಟುಮಾಡಿತು. ಈ ಘಟನೆ ಕ್ರೀಡಾಂಗಣದ 9ನೇ ಗೇಟ್ ಬಳಿ ನಡೆದಿದೆ. ಚಾಲಕನಿಗೆ ಪಿಡ್ಸ್ ಬಂದು ಅಪಘಾತ ಸಂಭವಿಸಿರಬಹುದೆಂದು ಶಂಕೆ ವ್ಯಕ್ತವಾಗಿದೆ.
ಸ್ಥಳಕ್ಕೆ ಕಬ್ಬನ್ ಪಾರ್ಕ್ ಸಂಚಾರಿ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷೆಯಲ್ಲಿದೆ. ಗಾಯಾಳುಗಳ ಸ್ಥಿತಿ ಹಾಗೂ ಚಾಲಕನ ಆರೋಗ್ಯ ಸ್ಥಿತಿ ಇನ್ನೂ ಸ್ಪಷ್ಟವಾಗಿಲ್ಲ ಎನ್ನಲಾಗಿದೆ.