ಉತ್ತರ ಕನ್ನಡ:- ಕಾರವಾರ ತಾಲೂಕಿನ ಶಿರವಾಡ ರೈಲ್ವೆ ನಿಲ್ದಾಣದ ಹಿಂಬದಿಯಲ್ಲಿ ಮಹಿಳೆಯೋರ್ವಳ ಮೃತದೇಹ ಪತ್ತೆಯಾಗಿತ್ತು. ಕೂಡಲೇ ಸ್ಥಳಕ್ಕೆ ಕಾರವಾರ ಗ್ರಾಮೀಣ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಮೇಲ್ನೋಟಕ್ಕೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿತ್ತು. ಹೀಗಾಗಿ ಡಾಗ್ ಸ್ಕ್ವಾಡ್ನಿಂದ ಆರೋಪಿಗಳ ಪತ್ತೆ ಕಾರ್ಯಕ್ಕೆ ಮುಂದಾಗಿದ್ದ ಪೊಲೀಸರಿಗೆ ಮೃತಳ ಗುರುತು ಪತ್ತೆಯಾಗಿದ್ದು, ಆಕೆಯ ಗಂಡನನ್ನು ವಶಕ್ಕೆ ಪಡೆಯಲಾಗಿದೆ.
ಶಿರವಾಡ ರೈಲ್ವೆ ನಿಲ್ದಾಣದ ಹಿಂಬದಿಯಲ್ಲಿ ಮಹಿಳೆಯೋರ್ವಳ ಮೃತದೇಹ ಪತ್ತೆಯಾಗಿತ್ತು. ಕೂಡಲೇ ಸ್ಥಳಕ್ಕೆ ಕಾರವಾರ ಗ್ರಾಮೀಣ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಮೇಲ್ನೋಟಕ್ಕೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿತ್ತು.
ಹೀಗಾಗಿ ಡಾಗ್ ಸ್ಕ್ವಾಡ್ನಿಂದ ಆರೋಪಿಗಳ ಪತ್ತೆ ಕಾರ್ಯಕ್ಕೆ ಪೊಲೀಸರು ಮುಂದಾಗಿದ್ದರು. ಇದೀಗ ಆಕೆಯ ಬ್ಯಾಗ್ನಲ್ಲಿ ಪತ್ತೆಯಾದ ಆಧಾರ್ ಕಾರ್ಡ್ಯಿಂದ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾದ ಮೃತದೇಹ ಸಂಜನಾ ತಳೆಕರ ಎಂಬುದು ದೃಢವಾಗಿದೆ.
ಇನ್ನು ಆಧಾರ್ ಕಾರ್ಡ್ ಪತ್ತೆಯಾಗುತ್ತಿದ್ದಂತೆ ಕೂಡಲೇ ಆಕೆಯ ಗಂಡನನ್ನು ಪೊಲೀಸರು ಸಂಪರ್ಕಿಸಿದ್ದರು. ಬಳಿಕ ಸ್ಥಳಕ್ಕೆ ಬಂದ ಗಜಾನನ ತಳೆಕರ, ‘ಮೃತದೇಹ ಕಂಡು ತನ್ನ ಹೆಂಡತಿ ಎಂದು ಒಪ್ಪಿಕೊಂಡಿದ್ದಾನೆ. ಮಹಿಳೆ ಸಂಜನಾ ಮೃತದೇಹವನ್ನು ಸರ್ಕಾರಿ ಆಸ್ಪತ್ರೆ ಶವಾಗಾರಕ್ಕೆ ರವಾನೆ ಮಾಡಲಾಗಿದೆ.