ಕೊಪ್ಪಳ: ಕುಮಾರಸ್ವಾಮಿಯವರು ರಾಜಕಾರಣದಲ್ಲಿ ಹಿಟ್ ಆಂಡ್ ರನ್ ಮಾಡಲ್ಲ ಎಂದು ಜೆಡಿಎಸ್ ರಾಜ್ಯ ಮುಖಂಡ ನಿಖಿಲ್ ಕುಮಾರಸ್ವಾಮಿ ಹೇಳಿದರು. ಕೊಪ್ಪಳ ನಗರದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿಯವರು ರಾಜಕಾರಣದಲ್ಲಿ ಹಿಟ್ ಆಂಡ್ ರನ್ ಮಾಡಲ್ಲ. ಸಮರ್ಪಕ ಸಾಕ್ಷ್ಯಾಧಾರ ಇದ್ದಾಗ ಮಾತ್ರ ವಿಷಯ ಪ್ರಸ್ತಾಪಿಸುತ್ತಾರೆ. ಸಮಯ ಬಂದಾಗ ಸಾಕ್ಷ್ಯಗಳನ್ನು ಒಂದೊಂದಾಗಿ ಬಿಡುಗಡೆ ಮಾಡುತ್ತಾರೆ.
Advertisement
ನಾವು ಬಿಜೆಪಿ ಜೊತೆ ಕೈ ಜೋಡಿಸಿದ್ದೇವೆ ಎಂದ ಮಾತ್ರಕ್ಕೆ ಪಕ್ಷದ ಸಿದ್ಧಾಂತಗಳನ್ನು ಮಾರಾಟಕ್ಕಿಟ್ಟಿಲ್ಲ. ಬಿಜೆಪಿ ಜೊತೆ ಶಾಶ್ವತ ಹೊಂದಾಣಿಕೆಗಾಗಿ ದೇವೇಗೌಡರು ತಮ್ಮ ಇಷ್ಟು ವರ್ಷದ ರಾಜಕೀಯ ಜೀವನದಲ್ಲಿ ಮೊದಲ ಸಲ ಕೈ ಜೋಡಿಸಿದ್ದಾರೆ. ಜೆಡಿಎಸ್ ಎಲ್ಲ ಸಮಾಜಗಳ ಪರ, ರೈತರ ಪರ ಸಕ್ರೀಯವಾಗಿರುತ್ತದೆ ಎಂದು ಹೇಳಿದರು.