ನಡುರಸ್ತೆಯಲ್ಲಿ ಗೂಳಿಗಳ ಕಾದಾಟ; ನಗರಸಭೆ ವಿರುದ್ಧ ಸ್ಥಳೀಯರ ಆಕ್ರೋಶ!

0
Spread the love

ಗದಗ: ಗದಗ ನಗರದ ಗಂಜಿ ಬಸವೇಶ್ವರ ಸರ್ಕಲ್‌ನಲ್ಲಿ ಬಳಿಯ ರಸ್ತೆಯಲ್ಲಿಯೇ ಗೂಳಿಗಳ ನಡುವೆ ಉಗ್ರ ಕಾಳಗ ನಡೆದಿದೆ. ಅರ್ಧ ಗಂಟೆಗೂ ಹೆಚ್ಚು ಕಾಲ ಬಿಡಾಡಿ ಗೂಳಿಗಳು ಪರಸ್ಪರ ಗುದ್ದಾಡಿದ್ದು, ಇದರಿಂದಾಗಿ ರಾಚೊಟೇಶ್ವರ ಹಾಗೂ ರೆಹಮತ್ ನಗರದ ರಸ್ತೆಯಲ್ಲಿ ಜನರ ಸಂಚಾರಕ್ಕೆ ಕೆಲಕಾಲ ತೊಂದರೆ ಉಂಟಾಯಿತು.

Advertisement

ಕಾದಾಟ ತೀವ್ರಗೊಂಡ ಹಿನ್ನೆಲೆಯಲ್ಲಿ ಸ್ಥಳೀಯರು ನೀರು ಎರಚಿ ಗೂಳಿಗಳನ್ನು ಭೀತಿಗೊಳಿಸಲು ಪ್ರಯತ್ನಿಸಿದ್ರು, ಗೂಳಿಗಳು ಬೆದರದೆ ಕಾದಾಟ ನಡೆಸುತ್ತಿದ್ದವು. ಕೊನೆಗೆ ಪಟಾಕಿ ಸಿಡಿಸಿ ಗೂಳಿಗಳನ್ನು ಚದುರಿಸಿದ ಬಳಿಕ ಮಾತ್ರ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿತು.

ಇನ್ನೂ ಬಿಡಾಡಿ ದನಗಳ ಹಾವಳಿ ಹೆಚ್ಚಳದಿಂದಾಗಿ ಜನರು ಬೇಸತ್ತಿದ್ದು, ಬಿಡಾಡಿ ದನಗಳ ಹಾವಳಿ ನಿಯಂತ್ರಣಕ್ಕೆ ಗದಗ ಬೆಟಗೇರಿ ನಗರಸಭೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದ ರಸ್ತೆಗಳ ಮೇಲೆ ಬಿಡಾಡಿ ಗೂಳಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಲು ಒತ್ತಾಯ ಮಾಡಿದ್ದಾರೆ.


Spread the love

LEAVE A REPLY

Please enter your comment!
Please enter your name here