ಬೆಂಗಳೂರು: ಸಿಸಿಬಿ ಪೊಲೀಸರು ರೌಡಿಶೀಟರ್ ಬೇಕರಿ ರಘುನನ್ನು ಕೋಕಾ ಕಾಯ್ದೆಯಡಿ ಬಂಧಿಸಿದ್ದಾರೆ. ಸಂಘಟಿತ ಅಪರಾಧ ತಡೆಯುವ ನಿಟ್ಟಿನಲ್ಲಿ ಕೋಕಾ ಅಸ್ತ್ರ ಪ್ರಯೋಗ ಮಾಡಲಾಗಿದೆ. ಕೋಕಾ ಕಾಯ್ದೆಯಡಿ ಬಂಧನವಾದ್ರೆ ಒಂದು ವರ್ಷ ಜಾಮೀನು ಸಿಗುವುದು ಅನುಮಾನವಾಗಿದ್ದು,
ಉದ್ಯಮಿ ಮನೋಜ್ ಅಪಹರಣ ಸಂಬಂಧ ಅರೆಸ್ಟ್ ಮಾಡಲಾಗಿದೆ. ರೌಡಿಶೀಟರ್ ರಾಜೇಶ್ ಅಲಿಯಾಸ್ ಅಪ್ಪಿ, ಮನೋಜ್‌ನಿಂದ ನಂದ ಕಿಶೋರ್‌ಗೆ 1.2 ಲಕ್ಷ ಹಣವನ್ನ ಸಾಲವಾಗಿ ಕೊಡಿಸಿದ್ದ. ಹಣ ಹಿಂದಿರುಗಿಸೋದು ತಡವಾದಾಗ ಕೊಟ್ಟ ಹಣ ವಾಪಸ್ ಕೊಡಿಸುವಂತೆ ಕೇಳ್ತಿದ್ದ. ನೀನೇ ಹಣ ಕೊಡಿಸಿದ್ದು ವಾಪಸ್ ಕೊಡಿಸು ಅಂತಾ ರಾಜೇಶನಿಗೆ ಮನೋಜ್ ದುಂಬಾಲು ಬಿದ್ದಿದ್ದ.
ಇದೇ ಸಂದರ್ಭದಲ್ಲಿ ಬೇಕರಿ ರಘು ಅಣ್ಣ ರೌಡಿ ಶ್ರೀನಿವಾಸ್, ಲೋಕಿ, ಸೋಮ ಅವರ ಗ್ಯಾಂಗ್ ಉದ್ಯಮಿ ಮನೋಜ್‌ನ ಅಪಹರಣ ಮಾಡಿತ್ತು. ನೆಲಮಂಗಲದ ಬಳಿ ಕರೆದೊಯ್ದು ಹಲ್ಲೆ ಮಾಡಿ ಹಣ ಕಿತ್ತ್ಕೊಂಡು ಬಿಟ್ಟು ಕಳಿಸಿದ್ರು.
ಪ್ರಕರಣ ಸಂಬಂಧ 6 ಮಂದಿಯನ್ನ ಬಂಧಿಸಿದ್ದ ಸಿಸಿಬಿ ಪೊಲೀಸರು ಬೇಕರಿ ರಘುಗಾಗಿ ಹುಡುಕಾಟ ನಡೆಸಿದ್ದರು. ನಿನ್ನೆ ಮಂಡ್ಯ ಬಳಿ ಬೇಕರಿ ರಘುನನ್ನ ಅರೆಸ್ಟ್ ಮಾಡಿದ್ದಾರೆ. ಇಂದು ಕೋರ್ಟ್‌ಗೆ ಹಾಜರು ಪಡಿಸಿ ಕಸ್ಟಡಿಗೆ ಪಡೆಯುವ ಸಾಧ್ಯತೆಯಿದೆ.


