ಗದಗ: ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ರಾಮಗಿರಿ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತ ಭಾರೀ ಆತಂಕ ಮೂಡಿಸಿದೆ. ಅತಿವೇಗದಲ್ಲಿ ಬಂದ ಕಾರೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ದೂರಕ್ಕೆ ಚಿಮ್ಮಿ ಬಿದ್ದಿದೆ. ಅಪಘಾತದ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ದಾಖಲಾಗಿದ್ದು, ನೋಡುಗರಲ್ಲಿ ಬೆಚ್ಚಿಬೀಳಿಸುವಂತಿದೆ.
ಈ ಅಪಘಾತದಲ್ಲಿ ಐವರು ಗಾಯಗೊಂಡಿದ್ದು, ಮಹಮ್ಮದಲ್ ತಂದೆ ಗೌಸ್ಮುದ್ದೀನ್ ಒಂಟಿ (27), ಫಾತಿಮಾ ಪತ್ನಿ ಗೌಸ್ಮುದ್ದೀನ್ ಒಂಟಿ (53), ಸಮ್ರೀನ್ ಪುತ್ರಿ ಖುಬುದ್ದೀನ್ ಒಂಟಿ (5), ಗಂಗವ್ವ ಪತ್ನಿ ಭೀಮಪ್ಪ ನಾಯ್ಕರ್ (75) ಹಾಗೂ ಭೀಮಪ್ಪ ತಂದೆ ರಾಮಪ್ಪ ನಾಯ್ಕರ್ (80) ಗಾಯಾಳುಗಳಾಗಿದ್ದಾರೆ. ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
ಘಟನೆಯ ಸಂಬಂಧ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತಕ್ಕೆ ಕಾರಣವೇನು ಎಂಬ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.



