HomeWorld Newsಸೊಮಾಲಿಯಾ ಕರಾವಳಿಯಲ್ಲಿ ಟರ್ಕಿಶ್ ಶಸ್ತ್ರಾಸ್ತ್ರ ಹೊತ್ತ ಕಾರ್ಗೋ ಶಿಪ್ ಹೈಜಾಕ್: 6 ಭಾರತೀಯರು ಸೇರಿ 10...

ಸೊಮಾಲಿಯಾ ಕರಾವಳಿಯಲ್ಲಿ ಟರ್ಕಿಶ್ ಶಸ್ತ್ರಾಸ್ತ್ರ ಹೊತ್ತ ಕಾರ್ಗೋ ಶಿಪ್ ಹೈಜಾಕ್: 6 ಭಾರತೀಯರು ಸೇರಿ 10 ಮಂದಿ ಒತ್ತೆಯಾಳು

For Dai;y Updates Join Our whatsapp Group

ನವದೆಹಲಿ: ಟರ್ಕಿಶ್ ಶಸ್ತ್ರಾಸ್ತ್ರಗಳು ಹಾಗೂ ಇತರ ಉಪಕರಣಗಳನ್ನು ಸಾಗಿಸುತ್ತಿದ್ದ ಕಾರ್ಗೋ ಹಡಗನ್ನು ಸೊಮಾಲಿಯಾ ಕರಾವಳಿಯಲ್ಲಿ ಕಡಲ್ಗಳ್ಳರು ಅಪಹರಿಸಿದ್ದಾರೆ. ಹಡಗಿನಲ್ಲಿದ್ದ ಆರು ಭಾರತೀಯರು ಸೇರಿದಂತೆ ಒಟ್ಟು 10 ಸಿಬ್ಬಂದಿ ಕಡಲ್ಗಳ್ಳರ ವಶದಲ್ಲಿದ್ದಾರೆ ಎಂದು ಸೊಮಾಲಿಯಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕ್ಯಾಮರೂನ್ ಧ್ವಜ ಹೊತ್ತ M/V LUTUF ಹಡಗನ್ನು ಸೋಮವಾರ ಸೊಮಾಲಿಯಾದ ಪಂಟ್ಲ್ಯಾಂಡ್‌ನ ಐಲ್ ಜಿಲ್ಲೆಯ ಮರ್ರಾಯದಿಂದ ಸುಮಾರು 3.5 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಕಡಲ್ಗಳ್ಳರು ಹೈಜಾಕ್ ಮಾಡಿದ್ದಾರೆ ಎನ್ನಲಾಗಿದೆ.

ಅಪಹರಣಕ್ಕೊಳಗಾದ ಸಿಬ್ಬಂದಿಯಲ್ಲಿ ಆರು ಭಾರತೀಯರು, ಒಬ್ಬ ಟರ್ಕಿಶ್ ಪ್ರಜೆ, ಒಬ್ಬ ಜಾರ್ಜಿಯನ್ ಪ್ರಜೆ ಹಾಗೂ ಇಬ್ಬರು ಸರ್ಬಿಯನ್ ಭದ್ರತಾ ಸಿಬ್ಬಂದಿ ಇದ್ದಾರೆ ಎಂದು ವರದಿಯಾಗಿದೆ.

ಪೋಲಾರ್ ಮೂವ್‌ಮೆಂಟ್ ಶಿಪ್ಪಿಂಗ್ ಒಡೆತನದ ಈ ಹಡಗು ಮೊಗಾದಿಶುವಿನಲ್ಲಿರುವ ಟರ್ಕಿಶ್ ಮಿಲಿಟರಿಗೆ ಶಸ್ತ್ರಾಸ್ತ್ರಗಳ ಜತೆಗೆ ಸಂವಹನ ಹಾಗೂ ಉಪಗ್ರಹ ಉಪಕರಣಗಳನ್ನು ಸಾಗಿಸುತ್ತಿತ್ತು ಎಂದು ವರದಿಗಳು ತಿಳಿಸಿವೆ. ಸುಮಾರು ಎಂಟು ಮಂದಿ ಕಡಲ್ಗಳ್ಳರು ಹಡಗಿನ ಮೇಲೆ ದಾಳಿ ನಡೆಸಿ ಬಳಿಕ ಅದನ್ನು ಪಂಟ್ಲ್ಯಾಂಡ್‌ನ ಡಂಗೊರೊಯೊ ಜಿಲ್ಲೆಯ ಗರ್ಮಾಲ್ ಬಳಿಯ ಕರಾವಳಿ ಪ್ರದೇಶದತ್ತ ಕೊಂಡೊಯ್ದಿದ್ದಾರೆ ಎನ್ನಲಾಗಿದೆ.

ಏಪ್ರಿಲ್ 26ರಂದು ನಡೆದ M/V ಸ್ವಾರ್ಡ್ ಹಡಗು ಅಪಹರಣದಲ್ಲಿ ಭಾಗಿಯಾಗಿದ್ದ ಕಡಲ್ಗಳ್ಳರೊಂದಿಗೆ ಈ ಗುಂಪಿಗೆ ಸಂಪರ್ಕವಿದೆ ಎಂದು ಸೊಮಾಲಿಯಾ ಅಧಿಕಾರಿ ತಿಳಿಸಿದ್ದಾರೆ.

ಹೈಜಾಕ್ ನಡೆದ ಪ್ರದೇಶದ ಮೇಲೆ ಟರ್ಕಿಯ ಎರಡು ಹಡಗುಗಳು, ಹೆಲಿಕಾಪ್ಟರ್‌ಗಳು ಹಾಗೂ ಡ್ರೋನ್‌ಗಳ ಮೂಲಕ ನಿಗಾ ವಹಿಸಲಾಗಿದೆ ಎಂದು ವರದಿಯಾಗಿದೆ.

ಈವರೆಗೆ M/V LUTUF ಹಡಗು, ಅದರಲ್ಲಿರುವ ಆರು ಭಾರತೀಯರು ಸೇರಿದಂತೆ ಸಿಬ್ಬಂದಿ ಹಾಗೂ ಸರಕುಗಳ ಕುರಿತು ಸಂಪೂರ್ಣ ಮಾಹಿತಿ ಲಭ್ಯವಾಗಿಲ್ಲ. ಭಾರತೀಯ ವಿದೇಶಾಂಗ ಸಚಿವಾಲಯದಿಂದಲೂ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಪಶ್ಚಿಮ ಏಷ್ಯಾದ ಸಾಗರ ವಲಯದಲ್ಲಿ ಸಂಘರ್ಷದ ಪರಿಸ್ಥಿತಿ ಮುಂದುವರಿದಿರುವ ಬೆನ್ನಲ್ಲೇ ಸೊಮಾಲಿಯಾ ಕರಾವಳಿಯಲ್ಲಿ ಕಡಲ್ಗಳ್ಳರ ಚಟುವಟಿಕೆ ಹೆಚ್ಚಾಗಿರುವುದು ಆತಂಕ ಮೂಡಿಸಿದೆ. 2026ರ ಮೊದಲ ಐದು ತಿಂಗಳಲ್ಲಿ ಸೊಮಾಲಿ ಸಮುದ್ರದಲ್ಲಿ 17ಕ್ಕೂ ಹೆಚ್ಚು ಹಡಗುಗಳು ಕಡಲ್ಗಳ್ಳರ ದಾಳಿಗೆ ಗುರಿಯಾಗಿರುವುದಾಗಿ ವರದಿಯಾಗಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img