ಜನಮನ ರಂಜಿಸಿದ ಕರ್ನಾಟಕ ಕಲಾವೈಭವ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಗದಗ ತಾಲೂಕಿನ ಹರ್ತಿ ಗ್ರಾಮದ ಕೆ.ಎಚ್. ಪಾಟೀಲ ರಂಗಮAದಿರದಲ್ಲಿ ಕನ್ನಡ ಮತ್ತು ಕಲಾಭಿವೃದ್ಧಿ ಸೇವಾ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು ಇವರ ಸಹಯೋಗದಲ್ಲಿ ಕರ್ನಾಟಕ ಕಲಾವೈಭವ ಕಾರ್ಯಕ್ರಮ ಸಮಸ್ತ ಕಲಾಭಿಮಾನಿಗಳ ಮನ ರಂಜಿಸಿತು. ಕಾರ್ಯಕ್ರಮವನ್ನು ಹರ್ತಿ ಗ್ರಾ.ಪಂ ಅಧ್ಯಕ್ಷೆ ಹಾಲವ್ವ ಕುಬೇರಪ್ಪ ಕುರಿ ಉದ್ಘಾಟಿಸಿದರು.

Advertisement

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಸೋಮರಡ್ಡಿ ನಡೂರ ಮಾತನಾಡಿ, ನಮ್ಮ ಗ್ರಾಮದಲ್ಲಿ ಇಂತಹ ಶಾಸ್ತ್ರಿಯ ಸಂಗೀತ, ನೃತ್ಯ ಹಾಗೂ ಜಾನಪದ ನೃತ್ಯ ಕಲಾವಿದರನ್ನು ಆಹ್ವಾನಿಸಿ ಕಾರ್ಯಕ್ರಮ ನೋಡಲು ಸದಾವಕಾಶ ಮಾಡಿಕೊಟ್ಟ ಇಲಾಖೆ ಮತ್ತು ಕನ್ನಡ ಮತ್ತು ಕಲಾಭಿವೃದ್ಧಿ ಸೇವಾ ಸಂಸ್ಥೆಗೆ ಅಭನಂದನೆ ಸಲ್ಲಿಸಿದರು.

ಪ್ರಭು ಹುಡೇದ ಮಾತನಾಡಿ, ಕನ್ನಡ ಮತ್ತು ಕಲಾಭಿವೃದ್ಧಿ ಸೇವಾ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಗಜಾನನ ವೆರ್ಣೇಕರ ನಮ್ಮೂರವರೇ ಆಗಿದ್ದು, ನಮ್ಮೂರಿನಲ್ಲಿ ಇಂತಹ ಅಭೂತಪೂರ್ವ ಕಾರ್ಯಕ್ರಮ ನಡೆಸಿರುವುದು ಹೆಮ್ಮೆಯ ವಿಚಾರವಾಗಿದೆ. ಇಂತಹ ಕಾರ್ಯಕ್ರಮಗಳು ಹೆಚ್ಚೆಚ್ಚು ಜರುಗಲಿ ಎಂದು ಅಭಿಪ್ರಾಯಪಟ್ಟರು.

ಗ್ರಾ.ಪಂ ಸದಸ್ಯ ಮಹೇಶ ಪಟ್ಟಣಶೆಟ್ಟಿ ಮಾತನಾಡಿ, ಕನ್ನಡ ಮತ್ತು ಕಲಾಭಿವೃದ್ಧಿ ಸೇವಾ ಸಂಸ್ಥೆ ಹಾಗೂ ಶ್ರೀ ರಾಜೇಶ್ವರಿ ಕಲಾ ಕುಟೀರ ಸಂಸ್ಥೆಗಳನ್ನು ಯಶಸ್ವಿಯಾಗಿ 25 ವರ್ಷಗಳ ಕಾಲ ಮುನ್ನಡೆಸುತ್ತಿರುವುದು ಶ್ಲಾಘನೀಯ ಎಂದರು.

ಅತಿಥಿಗಳಾದ ಬಿ. ಟಿ. ಸೋಮರಡ್ಡಿ ಮಾತನಾಡಿದರು. ವೇದಿಕೆಯಲ್ಲಿ ಶಂಕ್ರಪ್ಪ ನವಲಿ, ಸಿದ್ದಪ್ಪ ಜೊಂಡಿ, ಸಿ.ವಿ. ಪಾಟೀಲ, ಶಂಕ್ರಪ್ಪ ಭಜಂತ್ರಿ, ಬಿ.ಬಿ. ಹೊನ್ನಪ್ಪನವರ ಸೇರಿದಂತೆ ಗ್ರಾಮದ ಹಿರಿಯರು, ಗ್ರಾ.ಪಂ ಸದಸ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿ.ಬಿ. ಸೋಮರಡ್ಡಿ ವಹಿಸಿದ್ದರು. ಗಜಾನನ ವೆರ್ಣೇಕರ ಸ್ವಾಗತಿಸಿದರು. ಪಲ್ಲವಿ ಹಿರೇಮಠ ನಿರೂಪಿಸಿದರು. ಬಸವೇಶ್ವರ ಗುರುಕುಲ ಶಾಲೆಯ ಶಿಕ್ಷಕಿಯರು ಕಾರ್ಯಕ್ರಮಕ್ಕೆ ಸಹಕಾರ ನೀಡಿದರು.


Spread the love

LEAVE A REPLY

Please enter your comment!
Please enter your name here