ಮಲತಂದೆಯಿಂದ ಇಬ್ಬರು ಹೆಣ್ಣುಮಕ್ಕಳ ಹತ್ಯೆ ಪ್ರಕರಣ; ಆರೋಪಿ ಅರೆಸ್ಟ್

0
Spread the love

ಬೆಂಗಳೂರು: ನಾನು ಮದುವೆಯಾಗಿರುವ ಹೆಂಡತಿ ಬೇಕು. ಆದರೆ, ಆಕೆಯ ಮೊದಲ ಗಂಡನಿಗೆ ಜನಿಸಿದ್ದ ಇಬ್ಬರು ಹೆಣ್ಣುಮಕ್ಕಳ ಜವಾಬ್ದಾರಿ ಬೇಡವೆಂದು ಮಲತಂದೆಯೇ ಇಬ್ಬರು ಮಕ್ಕಳನ್ನು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ದಾಸರಹಳ್ಳಿಯಲ್ಲಿ ನಡೆದಿದೆ. ಇನ್ನೂ ಘಟನೆಗೆ ಸಮಬಂಧಿಸದಂತೆ ಹಂತಕನನ್ನು ಅಮೃತಹಳ್ಳಿ ಪೊಲೀಸರು ಬಂಧನ ಮಾಡಿದ್ದಾರೆ.

Advertisement

ಸಮಿತ್ ಬಂಧಿತ ಆರೋಪಿ. ಈತ ಕೊಲೆ ಮಾಡಿದ ಬಳಿಕ ಬಟ್ಟೆ ಬದಲಿಸಿಕೊಂಡು ಮನೆಯಿಂದ ಹೊರಗಡೆ ಹೋಗಿದ್ದ. ತಲೆಮರೆಸಿಕೊಂಡಿದ್ದವನನ್ನು ಘಟನೆ ನಡೆದ 2 ದಿನಗಳ ಒಳಗಾಗಿ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಮಲತಂದೆ ಸಮಿತ್ ಮಾತಿಗೆ ಹೆಣ್ಣು ಮಕ್ಕಳು ವಿರೋಧ ವ್ಯಕ್ತಪಡಿಸುತ್ತಿದ್ದರು ಎಂಬ ಕೋಪಕ್ಕೆ ಹೆಣ್ಣುಮಕ್ಕಳಿಬ್ಬರನ್ನು ಕೊಲೆ ಮಾಡಿರುವುದಾಗಿ ಪ್ರಾಥಮಿಕ ತನಿಖೆಯ ವೇಳೆ ಬಹಿರಂಗವಾಗಿದೆ.

ಕಳೆದ ಎರಡು ದಿನಗಳ ಹಿಂದೆ ಕಾವೇರಿಪುರದ ನಿವಾಸದಲ್ಲಿರುವ ತನ್ನ ಇಬ್ಬರು ಮಕ್ಕಳನ್ನು ಮಚ್ಚಿನಿಂದ ಭೀಕರವಾಗಿ ಕೊಲೆ ಮಾಡಿ ಆರೋಪಿಸುಮಿತ್ ಅಲ್ಲಿಂದ ಪರಾರಿಯಾಗಿದ್ದ. ಪ್ರಕರಣವನ್ನು ದಾಖಲಿಸಿಕೊಂಡಿದ್ದ ಅಮೃತ ಹಳೆಯ ಠಾಣೆಯ ಪೊಲೀಸರು ಸುಮಿತ್ ಗಾಗಿ ತೀವ್ರ ಶೋಧ ನಡೆಸಿದರು ನಿನ್ನೆ ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಆರೋಪಿಯನ್ನು ಬಂಧಿಸಿದ ಪೊಲೀಸರು ಇದೀಗ ವಿಚಾರಣೆಗೆ ಒಳಪಡಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here