ಹುಬ್ಬಳ್ಳಿ:- ಜಾತಿಗಣತಿಯ ಸಮೀಕ್ಷೆ ಮುಂದೂಡಬೇಕು, ಇದರಲ್ಲಿ ದೋಷಗಳಿವೆ ಎಂದು ವಚನಾನಂದ ಶ್ರೀ ಹೇಳಿದ್ದಾರೆ. ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಜಾತಿ ಗಣತಿಯಲ್ಲಿ ಸಾಕಷ್ಟು ದೋಷಗಳಿವೆ. ಸಮೀಕ್ಷೆ ಮುಂದೂಡಬೇಕು ಅನ್ನೋದು ನಮ್ಮ ನಿಲುವು. ಇಷ್ಟೊಂದು ಅರ್ಜಂಟ್‌ನಲ್ಲಿ ಯಾಕೆ ಸಮೀಕ್ಷೆ ಮಾಡುತ್ತಿದ್ದೀರಿ.
Advertisement
ಈ ಹಿಂದೆ ನಡೆಸಿದ್ದ ಕಾಂತರಾಜ ಆಯೋಗ ವರದಿ ವೈಜ್ಞಾನಿಕವಾಗಿರಲಿಲ್ಲ. ಇದೇ ಕಾರಣಕ್ಕೆ ಇದೀಗ ಮತ್ತೆ ವೈಜ್ಞಾನಿಕವಾಗಿ ಸಮೀಕ್ಷೆ ಮಾಡಲು ಮುಂದಾಗಿದ್ದೀರಿ. ಇದೀಗ ಇದರಲ್ಲಿ ಕೂಡಾ ಹರಿಬರಿ ಯಾಕೆ? ಈ ಸಮೀಕ್ಷೆ ಮೇಲೆ ಕರ್ನಾಟಕದ ಏಳು ಕೋಟಿ ಜನರ ಭವಿಷ್ಯ ಇದೆ. ಹೀಗಾಗಿ ಸರಿಯಾಗಿ ಸಮಾಧಾನವಾಗಿ ಈ ಕೆಲಸ ಮಾಡಬೇಕು ಎಂದರು
ಪಂಚಮಸಾಲಿ ಸಮುದಾಯದಲ್ಲಿ ಯಾವುದೇ ಗೊಂದಲವಿಲ್ಲ. ಗಣತಿಯಲ್ಲಿ ಏನು ಬರೆಸಬೇಕು ಎಂಬ ಗೊಂದಲವಿಲ್ಲ. ನಾವು ಧರ್ಮದ ಕಾಲಂನಲ್ಲಿ ಹಿಂದೂ ಜಾತಿ ಕಾಲಂನಲ್ಲಿ ಲಿಂಗಾಯತ ಪಂಚಮಸಾಲಿ ಅಂತ ಬರೆಸಲು ಹೇಳಿದ್ದೇವೆ ಎಂದು ತಿಳಿಸಿದರು