ಸಿಸಿಬಿ ಇನ್ಸ್​​ಪೆಕ್ಟರ್​ ತಿಮ್ಮೇಗೌಡ ಸೂಸೈಡ್ ಪ್ರಕರಣ: ಆತ್ಮಹತ್ಯೆಗೆ ಕಾರಣವಾಯ್ತು ಆ ಒಂದು ಕೇಸ್!?

0
Spread the love

ಬೆಂಗಳೂರು:- ಸಿಸಿಬಿ ಇನ್ಸ್​​ಪೆಕ್ಟರ್​ ತಿಮ್ಮೇಗೌಡ ಸೂಸೈಡ್ ಪ್ರಕರಣಕ್ಕೆ
ಟ್ವಿಸ್ಟ್ ಸಿಕ್ಕಿದ್ದು, ಆತ್ಮಹತ್ಯೆಗೆ ಆ ಒಂದು ಹೈಪ್ರೊಫೈಲ್ ಕೇಸ್ ಕಾರಣವಾಯ್ತು ಎನ್ನಲಾಗಿದೆ. ಹಾಗಿದ್ರೆ ಯಾವ ಕೇಸ್, ಆತ್ಮಹತ್ಯೆಗೂ, ಇದಕ್ಕೂ ಏನು ಸಂಬಂಧ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ.

Advertisement

1998ರ ಬ್ಯಾಚ್ ನ ಪೊಲೀಸ್ ಅಧಿಕಾರಿಯಾದ ತಿಮ್ಮೇಗೌಡ ಸದ್ಯ ಸಿಸಿಬಿ ಆರ್ಥಿಕ ಅಪರಾಧ ವಿಭಾಗದ ಇನ್ಸ್​​ಪೆಕ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಆದ್ರೆ ಅದೇನಾಯ್ತೋ ಏನೋ ನಿನ್ನೆ (ಆಗಸ್ಟ್​ 04) ರಾತ್ರಿ ಕಗ್ಗಲಿಪುರ ಪೊಲೀಸ್ ಠಾಣೆ ವ್ಯಾಪ್ತಿಯ ತಗಚಗುಪ್ಪೆ ಮುಖ್ಯ ರಸ್ತೆಯಲ್ಲಿರುವ ನಿರ್ಜನ ಪ್ರದೇಶದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂದು ಬೆಳಗ್ಗೆ ಸ್ಥಳೀಯರು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರಿಗೆ ಇನ್ಸ್ ಪೆಕ್ಟರ್ ತಿಮ್ಮೇಗೌಡ ಅನ್ನೋದು ಗೊತ್ತಾಗಿತ್ತು. ಬಳಿಕ ಕುಟುಂಬಸ್ಥರಿಗೂ ಮಾಹಿತಿ ನೀಡಿದ್ದು, ಅವರು ಮೈಸೂರಿನಿಂದ ಸ್ಥಳಕ್ಕಾಗಮಿಸಿ ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಆರೋಪಿಸಿದ್ದಾರೆ.

ಸಿಸಿಬಿಯಲ್ಲಿ ಇತ್ತೀಚೆಗೆ ಹೈಪ್ರೊಫೈಲ್ ಲೈಂಗಿಕ ದೌರ್ಜನ್ಯ ಪ್ರಕರಣ ಒಂದು ದಾಖಲಾಗಿತ್ತು..ಅದರ ತನಿಕಾಧಿಕಾರಿಯಾಗಿದ್ದ ತಿಮ್ಮೇಗೌಡರಿಗೆ ಆರೋಪಿಗಳನ್ನು ಬಂಧಿಸಿದ್ದ ವಿಚಾರಕ್ಕೆ ಸಂಬಂಧ ಪಟ್ಟಂತೆ ಒತ್ತಡಗಳು ಇತ್ತು ಅನ್ನೋ ಮಾತು ಕೂಡ ಇದೆ ಇದರ ಜೊತೆಗೆ 2004 ರಲ್ಲಿ ಹಾಸನದಲ್ಲಿ ಸಬ್ ಇನ್ಸ್ ಪೆಕ್ಟರ್ ಆಗಿದ್ದಾಗ ಈತನ ಮೇಲೆ ಒಂದು ಅತ್ಯಾಚಾರ ಪ್ರಕರಣ ಕೂಡ ದಾಖಲಾಗಿತ್ತು. ಸಂತ್ರಸ್ಥೆಗೆ ಮಗು ಕೂಡ ಜನಿಸಿದ್ದು ತಿಮ್ಮೇಗೌಡರ ಡಿಎನ್ಎ ಮ್ಯಾಚ್ ಆಗಿತ್ತು. ಆ ವಿಚಾರವಾಗಿ ಕೇಸ್ ನ್ಯಾಯಾಲಯದಲ್ಲಿ ಕಮಿಟ್ ಆಗಿದ್ದು, ಆಗಸ್ಟ್ 31 ಕ್ಕೆ ವಿಚಾರಣೆ ದಿನಾಂಕ ಕೂಡ ನಿಗದಿಯಾಗಿತ್ತು..ಈ ವಿಚಾರವಾಗಿಯು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನುವ ಮಾತು ಕೂಡ ಇದೆ.

ಇದಿಷ್ಟೇ ಅಲ್ಲ ಅತ್ತಿಬೆಲೆ ಪಟಾಕಿ ದುರಂತ ಸಂಭವಿಸಿದಾಗ ಅತ್ತಿಬೆಲೆ ಠಾಣೆ ಇನ್ಸ್ ಪೆಕ್ಟರ್ ಆಗಿದ್ದಿದ್ದು ಕೂಡ ಇದೇ ತಿಮ್ಮೇಗೌಡ. ಆ ಸಂದರ್ಭದಲ್ಲಿಯೂ ತಿಮ್ಮೇಗೌಡ ಅಮಾನತ್ತು ಆಗಿದ್ದರು. ಹೀಗೆ ತಿಮ್ಮೇಗೌಡ ಸಾವಿನ ಹಿಂದೆ ಸಾಲು ಸಾಲು ವೈಯಕ್ತಿಕ ಕಾರಣ ಸೇರಿದಂತೆ ಕೆಲಸದ ಒತ್ತಡದ ಮಾತು ಕೂಡ ಕೇಳಿ ಬರುತ್ತಿವೆ.

ಸದ್ಯ ಕೆಂಗೇರಿಯ ಆರ್ ಆರ್.ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹ ಮೈಸೂರಿನ ನಿವಾಸಕ್ಕೆ ಕೊಂಡೊಯ್ಯಲಾಗಿದ್ದು, ನಾಳೆ ಹುಟ್ಟೂರು ಚನ್ನಪಟ್ಟಣದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.


Spread the love

LEAVE A REPLY

Please enter your comment!
Please enter your name here