ಚಿತ್ತಾಪುರ: ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಲಂಚಪಡೆಯುತ್ತಿದ್ದ ಅಗ್ನಿಶಾಮಕ ಅಧಿಕಾರಿ , ಮತ್ತು ಸಿಬ್ಬಂದಿಯನ್ನು ರೆಡ್ ಹ್ಯಾಂಡ್ ಆಗಿ ಅರೆಸ್ಟ್ ಮಾಡಿದ್ದಾರೆ.
Advertisement
ಜಿಲ್ಲಾ ಅಗ್ನಿ ಶಾಮಕ ಅಧಿಕಾರಿ ಗುರುರಾಜ್ , ಅಗ್ನಿಶಾಮಕ ಸಿಬ್ಬಂಧಿ ಸೋಫನ್ ರಾವ್ ಲೋಕಾಯುಕ್ತ ಬಲೆಗೆ ಬಿದ್ದವರು ಎನ್ನಲಾಗಿದೆ.
ಚಿತ್ತಾಪುರದಲ್ಲಿ ಪೆಟ್ರೋಲ್ ಪಂಪ್ ಆರಂಭಸಿಲು ಎನ್ ಓ ಸಿ ಕೊಡಲು ಈ ಇಬ್ಬರು ಅಧಿಕಾರಿಗಳು ರಾಜರಾಮಪ್ಪ ನಾಯಕ್ ಎಂಬುವರ ಬಳಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಒಂದು ಲಕ್ಷಕ್ಕೆ ಲಂಚಕ್ಕೆ ಬೇಡಿಕೆ ಇಟ್ಟು 20 ಸಾವಿರ ಹಣ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಲೋಕಾಯುಕ್ತ ಡಿ ವೈ ಎಸ್ ಪಿ ಮಂಜುನಾಥ್ ನೇತೃತ್ವದಲ್ಲಿ ದಾಳಿ ನಡೆಸಿ ಗುರುರಾಜ್ ಮತ್ತು ಸೋಫನ್ ರಾವ್ ಇಬ್ಬರನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರಿದಿದೆ.