ವಿಜಯಸಾಕ್ಷಿ ಸುದ್ದಿ, ಗದಗ : ಅಶ್ವಿನಿ ಪ್ರಕಾಶನ, ಡಾ. ವ್ಹಿ.ಬಿ. ಹಿರೇಮಠ ಮೆಮೋರಿಯಲ್ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ವ್ಹಿ.ವ್ಹಿ. ಹಿರೇಮಠರಿಗೆ ಬಾದಾಮಿಯ `ಚಾಲುಕ್ಯ ಸೇವಾರತ್ನ’ ಪ್ರಶಸ್ತಿ ಸಂದಿದೆ.
Advertisement
ಯುಕ್ತಿ-ಶಕ್ತಿಗಳನ್ನು ಮೇಳೈಸಿಕೊಂಡು ಸದಾ ಕಾಯಕದಲ್ಲಿ ತೊಡಗಿಸಿಕೊಂಡು ಯಶಸ್ಸು ಹೊಂದುತ್ತಾ ಸಾಗುತ್ತಿರುವ ಡಾ. ವ್ಹಿ.ವ್ಹಿ. ಹಿರೇಮಠರಿಗೆ ಜುಲೈ 28ರಂದು ಬಾದಾಮಿ ಜಾನಪದ ಸಂಭ್ರಮ ಕಾರ್ಯಕ್ರಮದಲ್ಲಿ ಡಾ. ವ್ಹಿ.ವ್ಹಿ. ಹಿರೇಮಠರಿಗೆ ಗೌರವಪೂರ್ವಕವಾಗಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಸಂಸ್ಥೆಯ ಮಕ್ಕಳ ಸಾಹಿತ್ಯ ಪರಿಷತ್‌ನ ತಾಲೂಕಾಧ್ಯಕ್ಷ ಡಾ.ನಾಗರಾಜ ತಂಬ್ರಳ್ಳಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.