ಚಾಮರಾಜನಗರ: ಸಿಡಿಲು ಬಡಿದು ಹಸು ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಹೊಸದೊಡ್ಡಿ ಗ್ರಾಮದಲ್ಲಿ ನಡೆದಿದೆ. ಹೊಸದೊಡ್ಡಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಉಂಟಾದ ಸಿಡಿಲಿನ ಅಬ್ಬರಕ್ಕೆ ಹಸು ಬಲಿಯಾಗಿದ್ದು,
Advertisement
ಹೊಸದೊಡ್ಡಿ ಗ್ರಾಮದ ಸುಮತಿ ಕೋಂ. ಅರ್ಜುನ್ ಅವರ ಮಾಲೀಕತ್ವದ ಮಿಶ್ರತಳಿ ಹಸುವಾಗಿದೆ. ಹಸುವನ್ನು ಕೊಟ್ಟಿಗೆಗೆ ಕಟ್ಟಲಾಗಿತ್ತು. ಶುಕ್ರವಾರ ರಾತ್ರಿ ಸಿಡಿಲು ಬಡಿದ ರಭಸಕ್ಕೆ ಹಸು ಮೃತಪಟ್ಟಿದೆ.
ಘಟನೆ ಕುರಿತು ಮಾಹಿತಿ ಪಡೆದ ಪಶುಪಾಲನಾ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಮರಣೋತ್ತರ ಪರೀಕ್ಷೆ ನಡೆಸಿದರು. ಇನ್ನೂ ಸ್ಥಳೀಯ ರೈತರು ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು.