ಲಕ್ಷ್ಮೀ ನಿವಾಸ ಧಾರವಾಹಿ ವಿರುದ್ಧ ಗಂಭೀರ ಆರೋಪ ಮಾಡಿದ ಬಾಲ ನಟಿ ನಿಶಿತಾ ತಾಯಿ

0
Spread the love

ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಖ್ಯಾತ ಕಿರುತೆರೆ ಧಾರವಾಹಿ ಲಕ್ಷ್ಮೀ ನಿವಾಸದ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಲಕ್ಷ್ಮೀ ನಿವಾಸ ಧಾರವಾಹಿ ಮೂಲಕ ಕಿರುತೆರೆ ಲೋಕಕ್ಕೆ ಕಾಲಿಟ್ಟಿದ್ದ ಪುಟ್ಟ ಕಲಾವಿದೆ ನಿಶಿತಾ ಅವರ ತಾಯಿ ಧಾರವಾಹಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. 

Advertisement

ಈ ಹಿಂದೆ ನಿಶಿತಾ ಅವರು ಧಾರವಾಹಿಯಲ್ಲಿ ನಟಿಸುತ್ತಿದ್ದರು. ಆದ್ರೆ ಏಕಾಏಕಿ ನಿಶಾಳ ಜಾಗಕ್ಕೆ ಬೇರೆ ಮಗುವನ್ನು ಹಾಕಿಕೊಂಡು ಶೂಟಿಂಗ್‌ ಮಾಡಿದ್ದಾರೆ ಎಂದು ನಿಶಿತಾ ತಾಯಿ ಆರೋಪಿಸಿದ್ದಾರೆ.

ಹೌದು, ಕನ್ನಡದ ಲಕ್ಷ್ಮೀ ನಿವಾಸ ಸೀರಿಯಲ್​ನಲ್ಲಿ ಖುಷಿ ಪಾತ್ರದಲ್ಲಿ ನಟಿಸಿದ್ದರು. ಕನ್ನಡದ ಲಕ್ಷ್ಮೀ ನಿವಾಸ ಸೀರಿಯಲ್​ನಿಂದ ಆಚೆ ಬಂದ ಬಳಿಕ ತೆಲುಗು ಭಾಷೆಯಲ್ಲಿ ರಿಮೇಕ್ ಆಗಿತ್ತಿದ್ದು, ಲಕ್ಷ್ಮೀ ನಿವಾಸಂ ಧಾರಾವಾಹಿಯಲ್ಲಿ ನಟಿಸುತ್ತಿದ್ದರು. ಆದ್ರೆ, ಇವರಿಗೆ ಶೂಟಿಂಗ್‌ಗೆ ಬನ್ನಿ ಅಂತ ಹೇಳಿ, ಸೆಟ್‌ಗೆ ಕರೆಸಿಕೊಂಡು, ಅಲ್ಲಿ ಬೇರೆ ಮಗುವಿನ ಬಳಿ ಶೂಟಿಂಗ್‌ ಮಾಡಿಸಲಾಗಿದೆ. ಇದನ್ನು ನಿಶಾ ತಾಯಿ ಪ್ರಿಯಾ ವಿರೋಧಿಸಿ ಸೋಶಿಯಲ್‌ ಮೀಡಿಯಾ ಪೋಸ್ಟ್‌ ಹಂಚಿಕೊಂಡಿದ್ದಾರೆ. ಪ್ರಶಾಂತ್‌ ಮಿಲಿಶೆಟ್ಟಿ ಎನ್ನುವವರು ಈ ಧಾರಾವಾಹಿಯ ನಿರ್ಮಾಪಕರು ಎನ್ನಲಾಗಿದೆ.

ಶೂಟಿಂಗ್‌ ಮಾಡುವಾಗ ನನ್ನ ಮಗಳಿಗೆ ಕರೆಂಟ್‌ ಶಾಕ್‌ ಕೂಡ ಹೊಡೆದಿದೆ. ಸ್ವಿಮ್ಮಿಂಗ್‌ ಪೂಲ್‌ಗೂ ಕೂಡ ಬೀಳಿಸಿದ್ದಾರೆ. ಅಷ್ಟೇ ಅಲ್ಲದೆ ಲೇಟ್‌ ನೈಟ್‌ ಶೂಟ್‌ ಮಾಡಲಾಗಿದೆ ಎಂದು ಸಣ್ಣ ಸಣ್ಣ ವಿಡಿಯೋ ಕ್ಲಿಪ್​ಗಳನ್ನು ಪ್ರಿಯಾ ಅವರು ತಮ್ಮ ಅಕೌಂಟ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

ಈ ವಿಡಿಯೋ ಜೊತೆಗೆ ‘‘ಇದು ಅವಳ ಹೋರಾಟಕ್ಕೆ ಸಿಕ್ಕ ಉಡುಗೊರೆಯಾ? ಅವಳು ಎಂದಿಗೂ ನಾನು ಸುಸ್ತಾಗಿದ್ದೇನೆ ಎಂದು ಹೇಳಲಿಲ್ಲ, ಅವಳು ತುಂಬಾ ಕಷ್ಟಪಟ್ಟಿದ್ದಾಳೆ. ನಮಗೆ ಮೋಸ ಮಾಡಿ ಅವಳನ್ನು ಬಳಸಿಕೊಂಡ ನಿರ್ಮಾಪಕರ ಖಾತೆ ಮತ್ತು ನಿರ್ಮಾಣ ಸಂಸ್ಥೆಯ ಸ್ಕ್ರೀನ್‌ಶಾಟ್ ಅನ್ನು ನಾನು ಅಪ್‌ಲೋಡ್ ಮಾಡಿದ್ದೇನೆ. ಕೆಲಸ ಮಾಡಿರುವ ಉಳಿದ ಹಣವನ್ನು ಕೊಟ್ಟಿಲ್ಲ. ಕಳೆದ ಏಪ್ರಿಲ್ ತಿಂಗಳಿನಿಂದ ನಮಗೆ ಹಣವನ್ನು ಕೊಟ್ಟಿಲ್ಲ. ಕಷ್ಟ ಇರುತ್ತದೆ ಅಂತ ನಾವು ಅರ್ಥಮಾಡಿಕೊಂಡು ಸುಮ್ಮನಿದ್ದೆವು’’

‘‘ನೀವು ಲಕ್ಷ್ಮೀ ನಿವಾಸಂ ಧಾರಾವಾಹಿಯಿಂದ ನನ್ನ ಮಗಳನ್ನು ರಿಪ್ಲೇಸ್‌ ಮಾಡಿರಬಹುದು. ಆದರೆ ನನ್ನ ಮಗಳ ಪ್ರತಿಭೆಯನ್ನಲ್ಲ. ನಮ್ಮ ಹೊಟ್ಟೆಗೆ ಹೊಡೆದು, ನೀವು ಏನು ಪಡೆದುಕೊಳ್ತೀರಿ? ಲಕ್ಷ್ಮೀ ನಿವಾಸಂ ಧಾರಾವಾಹಿಗೋಸ್ಕರ ನಾವು ಬೇರೆ ಪ್ರಾಜೆಕ್ಟ್‌ಗಳನ್ನು ಬಿಟ್ಟೆವು, ನಿಮ್ಮ ಟಿಆರ್‌ಪಿಗೋಸ್ಕರ ನನ್ನ ಮಗಳನ್ನು 150 ಎಪಿಸೋಡ್‌ವರೆಗೂ ಬಳಸಿಕೊಂಡಿರಿ. ನೀವು ನನ್ನ ಮಗಳು ಎಕ್ಸ್‌ಪೆನ್ಸಿವ್‌ ಕಿಡ್‌ ಎಂದು ರಿಪ್ಲೇಸ್‌ ಮಾಡಿದ್ರಿ, ಹೌದು, ನನ್ನ ಮಗಳು ಎಕ್ಸ್‌ಪೆನ್ಸಿವ್’’ ಎಂದು ಸೋಶಿಯಲ್‌ ಮೀಡಿಯಾದಲ್ಲಿ ನಿಶಿತಾ ತಾಯಿ ಪೋಸ್ಟ್‌ ಹಂಚಿಕೊಂಡಿದ್ದಾರೆ.


Spread the love

LEAVE A REPLY

Please enter your comment!
Please enter your name here