ಮಂಡ್ಯ: ಮಂಡ್ಯದಲ್ಲಿ ಟ್ರಾಫಿಕ್ ಪೊಲೀಸರ ಯಡವಟ್ಟಿಗೆ ಮೂರು ವರ್ಷದ ಪುಟ್ಟ ಕಂದಮ್ಮ ಬಲಿಯಾಗಿದೆ. ಹೆಲ್ಮೆಟ್ ತಪಾಸಣೆ ವೇಳೆ ಬೈಕ್ ಅಡ್ಡಗಟ್ಟುವ ಭರದಲ್ಲಿ ಅಮಾನವೀಯವಾಗಿ ವರ್ತಿಸಿದ್ದು, ಜನಾಕ್ರೋಶಕ್ಕೆ ಕಾರಣವಾಗಿದೆ.
Advertisement
ಇದೀಗ ಸಚಿವ ಚಲುವರಾಯಸ್ವಾಮಿ ಪೋಷಕರನ್ನು ಭೇಟಿಯಾಗಿದ್ದಾರೆ. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಗೊರವನಹಳ್ಳಿ ಗ್ರಾಮದಲ್ಲಿರುವ ಮಗುವಿನ ಸ್ವಗೃಹಕ್ಕೆ ಸಚಿವ ಚಲುವರಾಯಸ್ವಾಮಿ, ಶಾಸಕ ಗಣಿಗ ರವಿಕುಮಾರ್ ಭೇಟಿ ನೀಡಿದ್ರು.
ಮಗುವಿನ ಪೋಷಕರ ಬಳಿ ಘಟನೆ ಬಗ್ಗೆ ಮಾಹಿತಿ ಪಡೆದ್ರು, ಈ ವೇಳೆ ಸಚಿವರ ಮುಂದೆ ಪೋಷಕರ ದುಃಖದ ಕೋಡಿ ಹರಿದಿತ್ತು. ಮಗಳ ಕಳೆದುಕೊಂಡ ಪೋಷಕರ ಗೋಳಾಡಿದ್ದು, ಈ ವೇಳೆ ಸಚಿವರು ಸಾಂತ್ವನ ಮಾತುಗಳನ್ನಾಡಿದ್ದಾರೆ. ಅಶೋಕ್ ಕುಟುಂಬಕ್ಕೆ ವೈಯಕ್ತಿಕವಾಗಿ ಒಂದುವರೆ ಲಕ್ಷ ಹಣವನ್ನು ಪರಿಹಾರವಾಗಿ ಸಚಿವ ಚಲುವರಾಯಸ್ವಾಮಿ ಕೊಟ್ಟಿದ್ದಾರೆ.