ವಿಜಯಸಾಕ್ಷಿ ಸುದ್ದಿ, ಗದಗ: ಮಗುವಿನ ಆಸೆ, ಆಕಾಂಕ್ಷೆಗಳಿಗೆ ಕುಟುಂಬದಲ್ಲಿ ಗೌರವ ಹಾಗೂ ಪ್ರೋತ್ಸಾಹವಿರಬೇಕು. ಜೊತೆಗೆ ಉತ್ತಮ ಮಾರ್ಗದರ್ಶನ ಇರಬೇಕೇ ಹೊರತು ತಮ್ಮ ಅಭಿಪ್ರಾಯಗಳನ್ನು ಹೇರಬಾರದು. ಮಕ್ಕಳು ಭವಿಷ್ಯತ್ತಿನ ರೂವಾರಿಗಳು ಎಂದು ಚಿಂತಕಿ ಕವಿತಾ ದಂಡಿನ ಹೇಳಿದರು.
ಅವರು ಗದಗ-ಬೆಟಗೇರಿ ರೋಟರಿ ಕ್ಲಬ್ ನಗರದ ಶ್ರೀಮತಿ ಉಮಾದೇವಿ ಕುಷ್ಟಗಿ ರೋಟರಿ ಕಮ್ಯೂನಿಟಿ ಕೇರ್ ಸೆಂಟರ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಮೌಲ್ಯ ಶಿಕ್ಷಣದ ಮಹತ್ವದ ಕುರಿತು ಮಾತನಾಡಿದರು.
ಇಂದಿನ ಆಧುನಿಕತೆಯ ಭರಾಟೆಯಲ್ಲಿ ಮಕ್ಕಳು ಉತ್ತಮ ಮೌಲ್ಯಗಳನ್ನು ರೂಢಿಸಿಕೊಳ್ಳುವ ಅವಶ್ಯಕತೆಯು ಅನಿವಾರ್ಯವಾಗಿದೆ. ಮಾನವೀಯತೆ, ಹಿರಿಯರಿಗೆ ಗೌರವ, ನಮ್ಮ ಸಂಸ್ಕೃತಿ, ಹಬ್ಬ ಹರಿದಿನಗಳ ಮಹತ್ವ, ರಾಷ್ಟಾçಭಿಮಾನ, ಐಕ್ಯತೆ ಹಾಗೂ ಸಹಕಾರದಂತಹ ಮಹತ್ವಪೂರ್ಣ ಸಾಮಾಜಿಕ, ಧಾರ್ಮಿಕ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಬೆಳೆದಿದ್ದೇ ಆದಲ್ಲಿ ಮುಂದೆ ಆ ಮಗು ಒಬ್ಬ ಮಹಾನ್ ವ್ಯಕ್ತಿ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು.
ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಗದಗ-ಬೆಟಗೇರಿ ಅಧ್ಯಕ್ಷ ಡಾ. ರೇವಣಸಿದ್ಧೇಶ್ವರ ಉಪ್ಪಿನ ವಹಿಸಿ ಮಾತನಾಡಿ ಮೌಲ್ಯಗಳು ನಮ್ಮ ಬದುಕಿನ ದಾರಿ ದೀಪಗಳು. ಮುಖ್ಯವಾಗಿ ಮಕ್ಕಳು ಹಾಗೂ ಯುವಕರಲ್ಲಿ ಮೌಲ್ಯಗಳನ್ನು ಗಟ್ಟಿಗೊಳಿಸುವ ಕಾರ್ಯ ನಡೆಯಬೇಕಿದೆ. ಜೊತೆಗೆ ಪ್ರವಾಸಗಳು ನಮಗೆ ಹೊಸ-ಹೊಸ ಅನುಭವ ನೀಡುತ್ತವೆ ಎಂದರು.
ಆತಿಥ್ಯ ವಹಿಸಿದ್ದ ವೀಣಾ ತಿರ್ಲಾಪೂರ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕ್ಲಬ್‌ನ ಸದಸ್ಯರುಗಳಾದ ಅಕ್ಷತ್ ಶೆಟ್ಟಿ, ಮಹಾಂತೇಶ ಬಾತಾಖಾನಿ, ಡಾ. ರಾಜಶೇಖರ ಬಳ್ಳಾರಿ ಅವರಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯ ಕೋರಲಾಯಿತು.
ಶ್ರೀಧರ ಸುಲ್ತಾನಪೂರ ಸ್ವಾಗತಿಸಿದರು. ಬಾಲಕೃಷ್ಣ ಕಮತ್, ವಿಶ್ವನಾಥ ಯಳಮಲಿ ಪರಿಚಯಿಸಿದರು. ಕಾರ್ಯದರ್ಶಿ ಸಂತೋಷ ಅಕ್ಕಿ ನಿರೂಪಿಸಿದರು. ಕೊನೆಯಲ್ಲಿ ಶಿವಾಚಾರ್ಯ ಹೊಸಳ್ಳಿಮಠ ವಂದಿಸಿದರು. ಕಾರ್ಯಕ್ರಮದಲ್ಲಿ ಡಾ. ಶೇಖರ ಸಜ್ಜನರ, ರಾಜಶೇಖರ ಬಳ್ಳಾರಿ, ಡಾ. ಕಮಲಾಕ್ಷಿ ಅಂಗಡಿ, ಮಹೇಶ ಬಾತಾಖಾನಿ, ಚಂದ್ರಮೌಳಿ ಜಾಲಿ, ಡಾ. ಆರ್.ಕೆ. ಗಚ್ಚಿನಮಠ, ಡಾ. ಪ್ರಕಾಶ ಕೊಲೊಳಗಿ, ಹೆಚ್.ಎಸ್. ಪಾಟೀಲ, ವಿಶ್ವನಾಥ ಪಾಟೀಲ, ಕಾರ್ತಿಕ ಮುತ್ತಿನಪೆಂಡಿಮಠ, ಸುಮಾ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.
ಮುಖ್ಯ ಅತಿಥಿಗಳಾಗಿದ್ದ ಉದ್ಯಮಿ ಚನ್ನವೀರಪ್ಪ ಹುಣಸೀಕಟ್ಟಿ ಮಾತನಾಡಿ, ಮನುಷ್ಯನ ಬದುಕಿನಲ್ಲಿ ಪ್ರವಾಸಗಳು ಉತ್ತಮ ಅನುಭವ ನೀಡುತ್ತವೆ. ಕುಂಭ ಮೇಳವು ಅದ್ಭುತವಾದ ಹಾಗೂ ಬದುಕಿನಲ್ಲಿ ಹೊಸತನ ನೀಡುವುದರೊಂದಿಗೆ ಧಾರ್ಮಿಕವಾಗಿ ಗಟ್ಟಿಗೊಳಿಸುತ್ತದೆ. ತಾವು ಕೈಗೊಂಡ ಪ್ರವಾಸದಲ್ಲಿ ಕಂಡುಕೊAಡ ಕುಂಭಮೇಳ ಕುರಿತು ತಮ್ಮ ಅನುಭವವನ್ನು ಹಂಚಿಕೊAಡರು.