ಚಿತ್ರದುರ್ಗ:- ಚಿತ್ರದುರ್ಗ ತಾಲೂಕಿನ ಸಿರಿಗೆರೆ ಗ್ರಾಮ ಪಂಚಾಯತಿ ಸದಸ್ಯನನ್ನು ಜಾತಿನಿಂದನೆ ಹಾಗೂ ಲೈಂಗಿಕ ಕಿರುಕುಳ ಆರೋಪದಡಿ ಅರೆಸ್ಟ್ ಮಾಡಲಾಗಿದೆ. ದೇವರಾಜ್ ಬಂಧಿತ ಆರೋಪಿ. ಆರೋಪಿ ದೇವರಾಜ್, ಜಾತಿನಿಂದನೆ ಮಾಡುತ್ತಿದ್ದರು. ಅಲ್ಲದೇ ಗ್ರಾ.ಪಂ ಅಧ್ಯಕ್ಷೆ ಹಾಗೂ ಪಿಡಿಓಗೆ ಲೈಂಗಿಕ ಕಿರುಕುಳ ನೀಡುತ್ತಿದ್ದರು
Advertisement
ಎಂದು ಪಂಚಾಯತಿಯ ಕ್ಲರ್ಕ್ ಜಯರಾಮ್ ಎಂಬುವವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಜಯರಾಮ್ ಅವರು ನೀಡಿದ ದೂರಿನಾಧಾರ ಆರೋಪಿ ದೇವರಾಜ್‌ರನ್ನು ಭರಮಸಾಗರ ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಕೈಗೊಂಡಿದ್ದಾರೆ.