ಕ್ರಿಸ್‌ಮಸ್ ರಿಲೀಸ್ ಆಗಿರುವ ‘ಮಾರ್ಕ್’ ಮತ್ತು ‘45’ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಮೊದಲ ದಿನವೇ ಅಬ್ಬರದ ಸೂಚನೆ ನೀಡಿವೆ. ರಜೆ ಇಲ್ಲದ ವಾರದ ದಿನದಲ್ಲೇ ಈ ಮಟ್ಟದ ಕಲೆಕ್ಷನ್ ಮಾಡಿರುವುದು ವೀಕೆಂಡ್‌ನಲ್ಲಿ ಭರ್ಜರಿ ಜಿಗಿತಕ್ಕೆ ಸೂಚನೆ ನೀಡುತ್ತಿದೆ.
ಸುದೀಪ್ ನಾಯಕತ್ವದ ‘ಮಾರ್ಕ್’ ಸಿನಿಮಾ ಮೊದಲ ದಿನ 6.28 ಕೋಟಿ ರೂಪಾಯಿ ಗಳಿಕೆ ಮಾಡಿ ಬಲಿಷ್ಠ ಓಪನಿಂಗ್ ಪಡೆದುಕೊಂಡಿದೆ. ‘ಮ್ಯಾಕ್ಸ್’ ಸಿನಿಮಾ ಶೇಡ್ ಕಾಣಿಸುತ್ತದೆ ಎನ್ನುವ ಚರ್ಚೆಯ ನಡುವೆಯೂ ಪಾಸಿಟಿವ್ ಟಾಕ್ ಚಿತ್ರಕ್ಕೆ ಲಾಭ ತಂದಿದೆ. ಎರಡು ದಿನಗಳಲ್ಲಿ ನಡೆಯುವ ಕಥೆ ಮತ್ತು ಫಾಸ್ಟ್ ಪೇಸ್ ಪ್ರೇಕ್ಷಕರನ್ನು ಸೆಳೆದಿದೆ.
ಇನ್ನು ಉಪೇಂದ್ರ, ಶಿವರಾಜ್‌ಕುಮಾರ್ ಮತ್ತು ರಾಜ್ ಬಿ. ಶೆಟ್ಟಿ ಅಭಿನಯದ ‘45’ ಸಿನಿಮಾ ಮೊದಲ ದಿನ 4.25 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಪ್ರೀಮಿಯರ್ ಶೋಗಳ ಲೆಕ್ಕ ಸೇರಿದರೆ 5 ಕೋಟಿ ರೂಪಾಯಿ ದಾಟುವ ಸಾಧ್ಯತೆ ಇದೆ. ಮಲ್ಟಿ ಸ್ಟಾರ್ ಕಾಸ್ಟ್ ಇರುವ ಕಾರಣ ಮುಂದಿನ ದಿನಗಳಲ್ಲಿ ಚಿತ್ರಕ್ಕೆ ಇನ್ನಷ್ಟು ಬೆಂಬಲ ಸಿಗಲಿದೆ ಎಂಬ ನಿರೀಕ್ಷೆ ಇದೆ.
ವಾರಾಂತ್ಯ ಮತ್ತು ಹೊಸ ವರ್ಷದ ಹಬ್ಬದ ದಿನಗಳಲ್ಲಿ ಎರಡೂ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಮಟ್ಟದ ಕಲೆಕ್ಷನ್ ಮಾಡುವ ಸಾಧ್ಯತೆ ಇದ್ದು, ಒಟ್ಟಾರೆ ಗಳಿಕೆ ಎಷ್ಟು ಆಗಲಿದೆ ಎಂಬ ಕುತೂಹಲ ಸಿನಿರಂಗದಲ್ಲಿ ಹೆಚ್ಚಾಗಿದೆ.



