ಯಾದಗಿರಿ : ಪಿಎಸ್ಐ ಪರಶುರಾಮ್ ಅವರ ಅನುಮಾನಾಸ್ಪದ ಸಾವು ಪ್ರಕರಣದ ತನಿಖೆ ಮಾಡಲು ಸಿಐಡಿ ತನಿಖಾ ತಂಡ ಯಾದಗಿರಿಗೆ ಭೇಟಿ ನೀಡಿದೆ. ಪಿಎಸ್ಐ ಪರಶುರಾಮ್ ಅವರ ಸಾವಿಗೆ ಸಂಬಂಧ ಶನಿವಾರ ರಾಜ್ಯ ಹೆದ್ದಾರಿ ತಡೆದು ಬೃಹತ್ ಪ್ರತಿಭಟನೆ ನಡೆಸಲಾಗಿತ್ತು.
Advertisement
ಪ್ರತಿಭಟನೆ ಗಂಭೀರತೆ ಪಡೆದ ಕಾರಣಕ್ಕೆ ಶಾಸಕ ಚೆನ್ನಾರಡ್ಡಿ ಪಾಟೀಲ್ ತುನ್ನೂರು ಹಾಗೂ ಅವರ ಪುತ್ರ ಸನ್ನಿಗೌಡ ತುನ್ನೂರು ಅವರ ವಿರುದ್ಧ ಎಫ್ಐಆರ್ ಮೃತ ಪಿಎಸ್ಐ ಪತ್ನಿ ನೀಡಿದ ದೂರಿನ ಮೇರೆಗೆ ಯಾದಗಿರಿ ನಗರ ಠಾಣೆಯಲ್ಲಿ ನಿನ್ನೆಯಷ್ಟೇ ಮಧ್ಯಾಹ್ನ ಪ್ರಕರಣ ದಾಖಲಾಗಿತ್ತು. ಬಳಿಕ ಈ ಪ್ರಕರಣವನ್ನು ಸರಕಾರ ಸಿಐಡಿ ತನಿಖೆಗೆ ವಹಿಸಿದೆ.