Homesocial avarenessಶುದ್ಧ ಗಾಳಿ, ನೀರು ಮರೀಚಿಕೆಯಾಗಿದೆ

ಶುದ್ಧ ಗಾಳಿ, ನೀರು ಮರೀಚಿಕೆಯಾಗಿದೆ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಡಂಬಳ : ಗಾಳಿ, ನೆಲ, ಜಲ, ಜನರು ಒಂದಕ್ಕೊಂದು ಸಾಮ್ಯತೆಯಿದ್ದು, ಸ್ವಚ್ಛ ಪರಿಸರ ಮತ್ತು ನೀರು ವೈಜ್ಞಾನಿಕ ತಳಹದಿಯ ಮೂಲಕ, ಅಭಿವೃದ್ಧಿಯ ನೆಪದಲ್ಲಿ ನೀರನ್ನು ಕಲುಷಿತ ಮತ್ತು ಭೂಮಿಯನ್ನು ಬರಡು ಮಾಡಿ ಶ್ರೀಮಂತರಾಗಬೇಕು ಎನ್ನುವ ಹುನ್ನಾರದಿಂದಾಗಿ ಇವತ್ತು ಶುದ್ಧ ಗಾಳಿ, ನೀರು ಸಿಗದಂತಾಗಿದೆ ಎಂದು ಡಂಬಳ ತೋಂಟದಾರ್ಯ ಮಠದ ವ್ಯವಸ್ಥಾಪಕ ಜಿ.ವಿ. ಹಿರೇಮಠ ಹೇಳಿದರು.

ಡಂಬಳ ಗ್ರಾಮದ ಜಗದ್ಗುರು ತೋಂಟದಾರ್ಯ ಜಮೀನಿನಲ್ಲಿ ಜಾನುವಾರಗಳಿಗೆ ಸಾರ್ವಜನಿಕರ ಹಿತಕ್ಕಾಗಿ ಕೆರೆಯ ಹೂಳೆತ್ತಿಸಿದ ಎಸ್‌ಬಿಐ ಪೌಂಡೇಶನ್‌ನ ಗ್ರಾಮ ಸಕ್ಷಮದ ಯೋಜನೆಯಡಿಯಲ್ಲಿ ಮತ್ತು ಸಂಕಲ್ಪ ರೂರಲ್ ಡೆವಲಪ್‌ಮೆಂಟ್ ಸೊಸೈಟಿಯ ಸಂಯುಕ್ತ ಆಶ್ರಯದಲ್ಲಿ ಸಮುದಾಯ ಕೃಷಿ ಹೊಂಡ ನಿರ್ಮಾಣ ಮತ್ತು ಪುನರುಜ್ಜೀವನ, ವಿಶ್ವ ಜಲ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಂಕಲ್ಪ ರೂರಲ್ ಡೆವಲಪ್‌ಮೆಂಟ್ ಸೊಸೈಟಿಯ ಸಿಇಓ ಸಿಕಂದರ ಮೀರಾನಾಯಕ ಮಾತನಾಡಿ, ವರ್ಷದಿಂದ ವರ್ಷಕ್ಕೆ ನೀರಿನ ಬಳಕೆ ಹೆಚ್ಚಾಗುತ್ತಿದ್ದು, ಶುದ್ಧ ಕುಡಿಯುವ ನೀರಿಗಾಗಿ ಜನ ಪರಿತಪಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ ನೀರಿನ ಮಹತ್ವ ಮತ್ತು ಸಂರಕ್ಷಣೆಗಾಗಿ ಜಾಗೃತಿಯ ಮೂಡಿಸಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಆಸ್ಟ್ರೇಲಿಯಾದ ಸಜಾರ ರಾಬಿನ್ನಸನ್ನ, ಶಂಕರಪ್ಪ ಗಡಗಿ, ಬಸುರಾಜ ಬಂಡಿ, ಮಾರುತಿ ಕೊಳ್ಳಾರ, ನಿಂಗಪ್ಪ ಹರಿಜನ, ಮಲ್ಲಣ್ಣ ಗಡಗಿ, ಎಸ್.ಎ. ಚಿಕರಡ್ಡಿ, ಎಸ್.ಎಸ್. ಇಟಗಿ, ಲಕ್ಷ್ಮಿಬಾಯಿ, ಯಲ್ಲಮ್ಮ ತಳವಾರ, ಶೋಭಾ, ಶಾಂತವ್ವ, ಶಂಕ್ರಮ್ಮ, ಫಾತೀಮಾ, ಮುನೇರಾ, ಶಾಂತಾ, ಸುನೀತಾ, ಶಾಂತವ್ವ ಬಂಗಾರಶೆಟ್ಟಿ, ಮಂಜುಳಾ ಬಡಿಗೇರ, ಬಸಮ್ಮ ಹಿರೇಮಠ, ಸಮೀನ್ ಚಾಂದಖಾನವರ ಮುಂತಾದವರಿದ್ದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!