• About
  • Advertise
  • Privacy & Policy
  • Contact
Sunday, November 8, 2026
Vijaya Sakshi News
Advertisement
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
  • E Paper
No Result
View All Result
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
  • E Paper
No Result
View All Result
Vijaya Sakshi News
  • Home
  • Gadag News
  • Karnataka News
  • Crime News
  • Politics News
  • Bengaluru News
  • Entertainment
  • Life Style
  • Sports News
Home employment news

ಬರಗಾಲ ಇದೆಯೆಂಬ ಭಯ ಬೇಡ

News Desk by News Desk
March 23, 2024
in employment news
naregunda
0
SHARES
0
VIEWS
Share on Facebook

ವಿಜಯಸಾಕ್ಷಿ ಸುದ್ದಿ, ನರಗುಂದ : ಬರಗಾಲವಿದೆಯೆಂದು ಗ್ರಾಮೀಣ ಪ್ರದೇಶದ ಕೂಲಿಕಾರರಿಗೆ ಭಯ ಬೇಡ. ಏಪ್ರಿಲ್ 1ರಿಂದ ಉದ್ಯೋಗ ಖಾತ್ರಿ ಕೆಲಸ ಆರಂಭವಾಗುತ್ತಿದ್ದು, ಯೋಜನೆಯಡಿ ಅನೇಕ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವ ಅವಕಾಶವಿದೆ. ಗ್ರಾಮೀಣ ಪ್ರದೇಶಗಳ ಕಡುಬಡವರಿಗೂ ಯೋಜನೆಯ ಸದೂಪಯೋಗ ದೊರಕುವಂತಾಗಲಿ ಎಂದು ನರಗುಂದ ತಾಲೂಕು ಪಂಚಾಯತ ಸಹಾಯಕ ನಿರ್ದೇಶಕ (ಗ್ರಾಮೀಣ-ಉದ್ಯೋಗ) ಸಂತೋಷಕುಮಾರ್ ಪಾಟೀಲ ಅಭಿಪ್ರಾಯಪಟ್ಟರು.

ನಗರದ ತಾಲೂಕು ಪಂಚಾಯತ ಸಭಾಭವನದಲ್ಲಿ ಶುಕ್ರವಾರ ನಡೆದ ಪಿಡಿಓ, ಕಾಯಕಬಂಧು ಹಾಗೂ ನರೇಗಾ ಸಿಬ್ಬಂದಿಯ ಒಂದು ದಿನದ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಬರಗಾಲದ ತೀವೃತೆಯಿಂದ ಕೆಲಸ ಸಿಗದಿರುವ ಆತಂಕದಲ್ಲಿರುವ ಗ್ರಾಮೀಣ ಪ್ರದೇಶ ಕೂಲಿಕಾರರಿಗೆ ನೆರವಾಗಲೆಂದು ಏಪ್ರಿಲ್ 1ರಿಂದ ನರೇಗಾ ಯೋಜನೆಯಡಿ ಸಮುದಾಯ ಕಾಮಗಾರಿಗಳನ್ನು ಆರಂಭಿಸಲಾಗುತ್ತಿದೆ. ಇದ್ದೂರಲ್ಲೇ ನರೇಗಾ ಕೆಲಸ ಕೊಡುತ್ತಿರುವುದು ಗ್ರಾಮೀಣ ಪ್ರದೇಶದ ಜನರ ಗುಳೇ ತಪ್ಪಿಸುವ ಕೆಲಸವಾಗಿದೆ. ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ನರೇಗಾ ಯೋಜನೆ ಮಹತ್ವದ ಪಾತ್ರವಹಿಸಿದೆ.

ಯೋಜನೆಯಡಿ ವಾರ್ಷಿಕವಾಗಿ 100 ದಿನಗಳವರೆಗೆ ಗ್ರಾಮೀಣ ಪ್ರದೇಶದ ಕೂಲಿಕಾರರಿಗೆ ಕೆಲಸ ಸಿಗುವಂತಾಗಬೇಕು. ಈ ಮೂಲಕ ಗ್ರಾಮೀಣ ಪ್ರದೇಶದ ಮೂಲಭೂತ ಸಮಸ್ಯೆಗಳನ್ನು ನಿವಾರಿಸಲು ನರೇಗಾ ವರದಾನವಾಗಲಿದೆ. ನರೇಗಾ ಕೆಲಸಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೂಲಿಕಾರರನ್ನು ಸೇರಿಸುವ ಕೆಲಸವಾಗಬೇಕೆಂದು ತರಬೇತಿಯಲ್ಲಿ ಭಾಗವಹಿಸಿದ್ದ ಕಾಯಕಬಂಧುಗಳಿಗೆ ಕಿವಿಮಾತು ಹೇಳಿದರು.

ಬೇಸಿಗೆ ಅವಧಿಯ 60 ದಿನಗಳ ಕಾಲ ನರೇಗಾ ಯೋಜನೆಯಡಿ ಕೆಲಸ ಮಾಡಿದರೆ ಕೂಲಿಕಾರರಿಗೆ 18,960 ರೂಪಾಯಿ ಸಿಗುತ್ತದೆ. ಕೂಲಿಕಾರರು ನರೇಗಾ ಯೋಜನೆಯಿಂದ ಬರುವ ಈ ಹಣವನ್ನು ಮುಂಗಾರಿನ ಕೃಷಿ ಬಿತ್ತನೆಯ ಕಾರ್ಯಕ್ಕೆ ಸದೂಪಯೋಗಪಡಿಸಿಕೊಳ್ಳಲು ನೆರವಾಗುವುದು ಎಂದು ಅಭಿಪ್ರಾಯಪಟ್ಟರು.

ಮಾಹಿತಿ ಮತ್ತು ಶಿಕ್ಷಣ ಸಂಯೋಜಕ ಸುರೇಶ ಬಾಳಿಕಾಯಿ ಮಾತನಾಡಿ, ಕಾಯಕಬಂಧುಗಳ ಪಾತ್ರ ಮತ್ತು ಜವಾಬ್ದಾರಿ ಕುರಿತು ತರಬೇತಿ ನೀಡಿದರು. ಬೇಸಿಗೆ ಅವಧಿಯಲ್ಲಿ ರೈತರ ಹೊಲದಲ್ಲಿ ಯೋಜನೆಯಡಿ ನಿರ್ಮಿಸುವ ಕಂದಕ, ಬದುಗಳ ನಿರ್ಮಾಣ ಮತ್ತು ಅನುಷ್ಠಾನ ಕುರಿತು ತಾಂತ್ರಿಕ ಸಂಯೋಜಕ ಹನಮಂತ ಡಂಬಳ ವಿಷಯ ಮಂಡಿಸಿದರು.

ತರಬೇತಿ ಕಾರ್ಯಾಗಾರವನ್ನು ಸಹಾಯಕ ನಿರ್ದೇಶಕರಾದ ಸಂತೋಷಕುಮಾರ್ ಪಾಟೀಲ್, ಆನಂದ ಭೋವಿ ಅವರು ಜಂಟಿಯಾಗಿ ಉದ್ಘಾಟಿಸಿದರು. ತರಬೇತಿ ಕಾರ್ಯಾಗಾರದಲ್ಲಿ ನರಗುಂದ ತಾಲೂಕಿನ 13 ಗ್ರಾ.ಪಂಗಳ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ನರೇಗಾ ಸಿಬ್ಬಂದಿ ವರ್ಗ, ಎಂಬಿಕೆ ಮತ್ತು ಎನ್.ಆರ್.ಎಲ್.ಎಂ ಸಿಬ್ಬಂದಿ ಹಾಜರಿದ್ದರು. ಎನ್.ಆರ್.ಎಲ್.ಎಂ ಸಂಯೋಜಕ ಲಕ್ಷ್ಮಣ ಪೂಜಾರ ನಿರೂಪಿಸಿದರು.

ಪಂಚಾಯತ್ ರಾಜ್ ಇಲಾಖೆಯ ಸಹಾಯಕ ನಿರ್ದೇಶಕಿ ಕೃಷ್ಣಮ್ಮ ಹಾದಿಮನಿ ಮಾತನಾಡಿ, ನರೇಗಾ ಕೆಲಸದಲ್ಲಿ ಮಹಿಳೆಯರು ಸ್ವಯಂ ಪ್ರೇರಣೆಯಿಂದ ಭಾಗವಹಿಸುವಂತಾಗಬೇಕು. ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರು ನರೇಗಾ ಯೋಜನೆಯಲ್ಲಿ ಮಹಿಳಾ ಭಾಗವಹಿಸುವಿಕೆ ಪ್ರಮಾಣ ಹೆಚ್ಚಿಸಲು ಶ್ರಮವಹಿಸಬೇಕೆಂದು ತಿಳಿಸಿದರು.

Tags: Information and Education Coordinator Suresh BalikaiNaragunda Taluk Panchayat Assistant Director (Rural-Employment) Santhosh Kumar PatilNarega SchemeTaluk Panchayat SabhabhavanTechnical Coordinator Hanamanta DambalaTraining workshop
ShareSendShare
Previous Post

ಶುದ್ಧ ಗಾಳಿ, ನೀರು ಮರೀಚಿಕೆಯಾಗಿದೆ

Next Post

ಸತ್ಯ ಶುದ್ಧ ಕಾಯಕದಿಂದ ಬದುಕು ಸಾರ್ಥಕ

News Desk

News Desk

Next Post
rambhapuri

ಸತ್ಯ ಶುದ್ಧ ಕಾಯಕದಿಂದ ಬದುಕು ಸಾರ್ಥಕ

Stay Connected test

  • 24k Followers
  • 99 Subscribers
  • Trending
  • Comments
  • Latest

ಪೊಲೀಸ್ ವೇಷದಲ್ಲಿ ಅಮಾಯಕರಿಗೆ ಬೆದರಿಕೆ: ಸಂಜಯ ಕೊಪ್ಪದ ಬಂಧನಕ್ಕೆ ಸರ್ಕಾರದ ಮುದ್ರೆ

October 24, 2026
ಧಾರಾಕಾರ ಮಳೆಗೆ ತತ್ತರಿಸಿದ ಗದಗ: ಸಿಡಿಲು ಬಡಿದು ಕುರಿಗಾಯಿ ಸಾವು, 5 ಆಡುಗಳು ಬಲಿ

ಧಾರಾಕಾರ ಮಳೆಗೆ ತತ್ತರಿಸಿದ ಗದಗ: ಸಿಡಿಲು ಬಡಿದು ಕುರಿಗಾಯಿ ಸಾವು, 5 ಆಡುಗಳು ಬಲಿ

October 23, 2026
ಲಕ್ಷ್ಮೇಶ್ವರ, ಶಿರಹಟ್ಟಿಯಲ್ಲಿ ಲೋಕಾಯುಕ್ತ ಅಧಿಕಾರಿಗಳ ದಿಢೀರ್ ಪರಿಶೀಲನೆ

ಲಕ್ಷ್ಮೇಶ್ವರ, ಶಿರಹಟ್ಟಿಯಲ್ಲಿ ಲೋಕಾಯುಕ್ತ ಅಧಿಕಾರಿಗಳ ದಿಢೀರ್ ಪರಿಶೀಲನೆ

November 4, 2026
Crime News: ಅರಣ್ಯ ಇಲಾಖೆ ನೌಕರ ವಿಠಲ್ ಜೋನಿ ಆತ್ಮಹತ್ಯೆ: ಕಾರಣ ನಿಗೂಢ

Crime News: ಅರಣ್ಯ ಇಲಾಖೆ ನೌಕರ ವಿಠಲ್ ಜೋನಿ ಆತ್ಮಹತ್ಯೆ: ಕಾರಣ ನಿಗೂಢ

October 25, 2026
Single Post Template – Fast News

ದೇವಸ್ಥಾನದಲ್ಲಿ 3 ಕೊಲೆ: ಹುಂಡಿಗಳ್ಳರ ಅಮಾನುಷ ಕೃತ್ಯ

0
Single Post Template – Fast News

ಕೋಡಿಹಳ್ಳಿಯವರಿಗೆ ಇಷ್ಟೊಂದು ಅಜ್ಞಾನ ಇದೆ ಅಂತ ಗೊತ್ತಿರಲಿಲ್ಲ: ಬಿ.ಸಿ.ಪಾಟೀಲ

0
Single Post Template – Fast News

ಕತ್ತಲಲ್ಲಿ ಕ್ವಾರಂಟೈನ್ ಸೆಂಟರ್; ಪರದಾಡಿದ ಕೊವಿಡ್ ರೋಗಿಗಳು!

0
Single Post Template – Fast News

ನಗರಸಭೆ ಆಯುಕ್ತರ ಕುರ್ಚಿ ಮಾರಾಟವಾಯ್ತೆ?
ಉಸ್ತುವಾರಿ ಸಚಿವರು ತಮ್ಮ ಹಠ ಸಾಧಿಸಿಯೇ ಬಿಟ್ಟರೆ?

0
‘ಕಾಂಗ್ರೆಸ್ ಯುವಜನರ ರಕ್ತ ಹೀರಿ ಬದುಕುತ್ತಿದೆ’: ಸರ್ಕಾರದ ವಿರುದ್ಧ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ

ವಿಪಕ್ಷ ನಾಯಕನ ಮನೆಗೆ ಚಾಕು ಪಾರ್ಸೆಲ್: FIR ದಾಖಲಿಸಿ ತನಿಖೆ ಆರಂಭಿಸಿದ ಪೊಲೀಸರು!

November 8, 2026
‘ಅಸೂಯೆಗೆ ಮದ್ದಿಲ್ಲ, ಟೀಕೆ ಸಾಯುತ್ತೆ-ಕೆಲಸ ಉಳಿಯುತ್ತೆ’: ಹೆಚ್‌ಡಿಕೆ ವಿರುದ್ಧ ಡಿಕೆಶಿ ವಾಗ್ದಾಳಿ!

ದೀಪಾವಳಿ ಹೊತ್ತಲ್ಲೇ ಬೆಲೆ ಏರಿಕೆ ಬರೆ: ನ.11ರಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿಯಿಂದ ಬೃಹತ್ ಪ್ರತಿಭಟನೆ!

November 8, 2026
‘ರಾಮಾಯಣ’ ಟ್ರೇಲರ್ ರಿಲೀಸ್‌: ರಾಮನಾಗಿ ರಣಬೀರ್, ರಾವಣನಾಗಿ ಯಶ್ ಅಬ್ಬರ

ಮೊದಲ ಮೂರು ದಿನಗಳಲ್ಲೇ ದಾಖಲೆ ಗಳಿಕೆ: 375 ಕೋಟಿ ಕ್ಲಬ್ ಸೇರಿದ ‘ರಾಮಾಯಣ’

November 8, 2026
ದೇವಿರಮ್ಮ ಬೆಟ್ಟದಲ್ಲಿ ಅವಘಡ: ಕಂಬಿ ಮುರಿದು 20ಕ್ಕೂ ಹೆಚ್ಚು ಭಕ್ತರಿಗೆ ಗಾಯ!

ದೇವಿರಮ್ಮ ಬೆಟ್ಟದಲ್ಲಿ ಅವಘಡ: ಕಂಬಿ ಮುರಿದು 20ಕ್ಕೂ ಹೆಚ್ಚು ಭಕ್ತರಿಗೆ ಗಾಯ!

November 8, 2026

Recent News

We bring you the best Premium WordPress Themes that perfect for news, magazine, personal blog, etc. Check our landing page for details.

Browse by Category

Recent News

‘ಕಾಂಗ್ರೆಸ್ ಯುವಜನರ ರಕ್ತ ಹೀರಿ ಬದುಕುತ್ತಿದೆ’: ಸರ್ಕಾರದ ವಿರುದ್ಧ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ

ವಿಪಕ್ಷ ನಾಯಕನ ಮನೆಗೆ ಚಾಕು ಪಾರ್ಸೆಲ್: FIR ದಾಖಲಿಸಿ ತನಿಖೆ ಆರಂಭಿಸಿದ ಪೊಲೀಸರು!

November 8, 2026
‘ಅಸೂಯೆಗೆ ಮದ್ದಿಲ್ಲ, ಟೀಕೆ ಸಾಯುತ್ತೆ-ಕೆಲಸ ಉಳಿಯುತ್ತೆ’: ಹೆಚ್‌ಡಿಕೆ ವಿರುದ್ಧ ಡಿಕೆಶಿ ವಾಗ್ದಾಳಿ!

ದೀಪಾವಳಿ ಹೊತ್ತಲ್ಲೇ ಬೆಲೆ ಏರಿಕೆ ಬರೆ: ನ.11ರಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿಯಿಂದ ಬೃಹತ್ ಪ್ರತಿಭಟನೆ!

November 8, 2026
  • About
  • Advertise
  • Privacy & Policy
  • Contact

Vijaya Sakshi 2026 CREATED BY Kalahamsa Infotech. PREMIUM WEBSITE SOLUTIONS.

error: Content is protected !!
Join WhatsApp ▤ Read E-Paper