ವಿಜಯಸಾಕ್ಷಿ ಸುದ್ದಿ, ರೋಣ : ವರ್ಷದುದ್ದಕ್ಕೂ ಆಟೋಟ, ವಿವಿಧ ಸ್ಪರ್ಧೆಗಳಲ್ಲಿ ನಿಮ್ಮ ಪ್ರತಿಭೆ ತೋರಿದಂತೆ ಇನ್ನು ಅಭ್ಯಾಸದತ್ತ ಗಮನ ಹರಿಸಿ. ಸತತ ಓದು ಯಶಸ್ಸಿನ ಮೆಟ್ಟಿಲು ಎಂದು ಗದಗ ನಗರದ ಪಿ.ಪಿ.ಜಿ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ರಾಜಶೇಖರ ದಾನರಡ್ಡಿ ಹೇಳಿದರು.
ಅವರು ಹೊಳೆಆಲೂರಿನ ಶ್ರೀ ಕವಿಪ್ರ ಸಮಿತಿಯ ಕಲಾ, ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯ ಹಾಗೂ ಕನ್ನಡ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪಠ್ಯೇತರ ಚಟುವಟಿಕೆಗಳ ಮುಕ್ತಾಯ ಸಮಾರಂಭದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಪಠ್ಯದಷ್ಟೇ ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳಿಗೆ ಮುಖ್ಯವಾಗಿದ್ದು, ನಮ್ಮ ಪ್ರತಿಭೆಗಳನ್ನು ಬೆಳಕಿಗೆ ತರಲು ವಿವಿಧ ವಿಭಾಗಗಳು ಇರುತ್ತವೆ. ಓದಿಗೆ ದೈಹಿಕ ಆರೋಗ್ಯವೂ ಅಗತ್ಯ. ಹಾಗಾಗಿ ಆರೋಗ್ಯದ ಕಾಳಜಿ ನಿಮಗಿರಲಿ. ಪರೀಕ್ಷೆ ನಿಮ್ಮ ಭವಿಷ್ಯದ ಜೀವನ ರೂಪಿಸುವಲ್ಲಿ ಕಾರಣವಾಗುವದರಿಂದ ಓದಿನ ಕಡೆ ಹೆಚ್ಚು ಗಮನ ಹರಿಸಿ ಎಂದು ಕಿವಿಮಾತು ಹೇಳಿದರು.
ಅಧ್ಯಕ್ಷತೆಯನ್ನು ಪ್ರಾಚಾರ್ಯ ಡಾ.ಪ್ರಭು ಗಂಜಿಹಾಳ ವಹಿಸಿದ್ದರು. ವೇದಿಕೆಯಲ್ಲಿ ಕವಿಪ್ರ ಸಮಿತಿ ನಿರ್ದೇಶಕರಾದ ಜಿ.ಆರ್. ಕಂಬಿ, ಐಕ್ಯೂಎಸಿ ಕೋ-ಆರ್ಡಿನೇಟರ್ ಡಾ. ಎಸ್.ಬಿ. ಸಜ್ಜನರ್, ಸಾಂಸ್ಕೃತಿಕ ವಿಭಾಗದ ಕಾರ್ಯಾಧ್ಯಕ್ಷ, ಎನ್‌ಎಸ್‌ಎಸ್ ಯೋಜನಾಧಿಕಾರಿ ಪ್ರೊ. ವಿಶ್ವನಾಥ ಪಾಟೀಲ, ಮಹಾವಿದ್ಯಾಲಯದ ಪ್ರಧಾನ ಕಾರ್ಯದರ್ಶಿ ರವಿಚಂದ್ರ ಕುರಿ, ಮಹಿಳಾ ಪ್ರತಿನಿಧಿ ಅನಿತಾ ಅಂಗಡಕಿ ಉಪಸ್ಥಿತರಿದ್ದರು.
ಪೂಜಾ ಬೆಳವಲ, ಅಕ್ಷತಾ ಮಣ್ಣೂರ ಪ್ರಾರ್ಥಿಸಿದರು. ಬಹುಮಾನ ವಿತರಣೆ ಕಾರ್ಯಕ್ರಮವನ್ನು ಪ್ರೊ. ರೇಷ್ಮಾ ಟೆಕ್ಕೇದ ನಡೆಸಿಕೊಟ್ಟರು. ಮಧು ಗಾಣಿಗೇರ ಸ್ವಾಗತಿಸಿದರು. ಮಧು ತಳವಾರ ನಿರೂಪಿಸಿದರು.
ಮಹಾದೇವಿ ಗೋಲಗೌಡ್ರ ವಂದಿಸಿದರು. ಸ್ನಾತಕೋತ್ತರ ಕನ್ನಡ ವಿಭಾಗದ ಸಂಯೋಜನಾಧಿಕಾರಿ ಪ್ರೊ. ಎಂ.ಎಸ್. ಬೇವೂರ, ಪ್ರೊ. ಎನ್.ಆರ್. ಹಿರೇಸಕ್ಕಗೌಡರ, ಪ್ರೊ. ಎಸ್.ವಾಯ್. ಪೂಜಾರ್, ಡಾ.ಕುಮಾರ ಹಂಜಗಿ, ಪ್ರೊ. ಎಂ.ಎಸ್. ಹೊನವಾಡ, ಪ್ರೊ. ಕೆ.ಎ. ಕೊಪ್ಪದ, ಪ್ರೊ. ಎಸ್.ಬಿ. ಹಳ್ಳೂರ, ಪ್ರೊ. ಶಿಲ್ಪಾ ಮೆದನಾಪೂರ, ಪ್ರೊ. ವಿನೋದ ಕಪ್ಪಲಿ, ಪ್ರೊ. ವಿ.ಬಿ. ಜಾಲಿಹಾಳ, ಪ್ರೊ. ಆನಂದ ಕೆಂಚನಗೌಡರ, ಪ್ರೊ. ಎಸ್.ಪಿ. ಗಡಗಿ, ಎಸ್.ಜಿ. ಮಾಳವಾಡ ಮುಂತಾದವರಿದ್ದರು.
ಅತಿಥಿಗಳಾಗಿ ಆಗಮಿಸಿದ್ದ ಕವಿಪ್ರ ಸಮಿತಿ ನಿರ್ದೇಶಕ ಡಿ.ಎಸ್. ಶೆಲ್ಲಿಕೇರಿ ಮಾತನಾಡಿ, ವಿದ್ಯಾರ್ಥಿಗಳು ವೇಳೆಯನ್ನು ವ್ಯರ್ಥ ಮಾಡದೆ ಓದಿನ ಕಡೆ ಲಕ್ಷ್ಯ ಕೊಟ್ಟು ಸಂಸ್ಥೆಗೆ ಹೆಸರು ತನ್ನಿ ಎಂದರು.