ವಿಜಯಸಾಕ್ಷಿ ಸುದ್ದಿ, ಗದಗ : ರೋಟರಿ ಸಂಸ್ಥೆಯು ಉನ್ನತ ಹೆಗ್ಗಳಿಕೆ ಪಡೆದದ್ದು, ತನ್ನ ಸಮಾಜಮುಖಿ ಕಾರ್ಯದಿಂದಾಗಿ ನಾವೆಲ್ಲರೂ ಸಮಾಜಸೇವೆಗಾಗಿ ತೊಡಗಿಸಿಕೊಂಡು ವರ್ಷಪೂರ್ತಿ ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ವಿಗೊಳಿಸೋಣ ಎಂದು ಗದಗ-ಬೆಟಗೇರಿ ರೋಟರಿ ಕ್ಲಬ್ ಅಧ್ಯಕ್ಷ ಡಾ.ರೇವಣಸಿದ್ದೇಶ್ವರ ಉಪ್ಪಿನ ಹೇಳಿದರು.
ಅವರು ಗದುಗಿನ ರೋಟರಿ ಐಕೇರ್ ಸೆಂಟರ್‌ದಲ್ಲಿ ಜರುಗಿದ ಗದಗ-ಬೆಟಗೇರಿ ರೋಟರಿ ಕ್ಲಬ್‌ನ ‘ಕ್ಲಬ್ ಅಸೆಂಬ್ಲಿ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತಮ್ಮ ಅಧಿಕಾರ ಅವಧಿಯಲ್ಲಿ ಎಲ್ಲರ ಸಲಹೆ-ಸೂಚನೆ ಮೇರೆಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಸರ್ವರೂ ಕೈ ಜೋಡಿಸಿ ಅವುಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸೋಣ ಎಂದರು.
ಕ್ಲಬ್‌ನ ಅಸಿಸ್ಟಂಟ್ ಗವರ್ನರ್ ಶಿವಾಚಾರ್ಯ ಹೊಸಳ್ಳಿಮಠ ಮಾತನಾಡಿ, ಕ್ಲಬ್‌ನ ಸದಸ್ಯರು ಹಾಗೂ ನಿರ್ದೆಶಕರು ಎಲ್ಲ ಸದಸ್ಯರ ಅಭಿಪ್ರಾಯವನ್ನು ಸಂಗ್ರಹಿಸಿ ಇಂದು ಬಜೆಟ್ ಮಂಡನೆ ಮಾಡಿದ್ದು, ಇದರಲ್ಲಿ ಸಮಾಜಕ್ಕೆ ಉಪಯುಕ್ತವಾದ ಕಾರ್ಯಕ್ರಮಗಳನ್ನು ಸಾಕಾರಗೊಳಿಸೋಣ ಎಂದರು.
ಕ್ಲಬ್‌ನ ಖಜಾಂಚಿ ಶ್ರೀಧರ ಸುಲ್ತಾನಪೂರ 2024-25ನೇ ಸಾಲಿನ ಆಯ-ವ್ಯಯ ಯೋಜನೆಗಳನ್ನು ವಿವರವಾಗಿ ಮಂಡಿಸಿ ಬರಲಿರುವ ವರ್ಷದ ಕ್ಲಬ್‌ನ ಗುರಿಗಳನ್ನು ವಿವರಿಸಿದರು. 2024-25ನೇ ಸಾಲಿನ ನಿರ್ದೆಶಕರಾದ ಡಾ. ಆರ್.ಕೆ. ಗಚ್ಚಿನಮಠ, ಕೆ.ಎನ್. ರೇವಣಕರ, ಎನ್.ಡಿ. ಜೈನ್, ವ್ಹಿ.ಎಸ್. ಯಳಮಲಿ, ಕೆ.ಎಸ್. ಅಂಗಡಿ ಕ್ಲಬ್‌ನ ವಿವಿಧ ಜವಾಬ್ದಾರಿಗಳನ್ನು ಹಾಗೂ ಯೋಜನೆಯನ್ನು ವಿವರಿಸಿದರು.
ಡಾ. ಆರ್.ಡಿ. ಉಪ್ಪಿನ ಸ್ವಾಗತಿಸಿದರು. ಡಾ. ಜಿ.ಬಿ. ಪಾಟೀಲ ಪರಿಚಯಿಸಿದರು. ಕ್ಲಬ್ ಕಾರ್ಯದರ್ಶಿ ಸಂತೋಷ ಅಕ್ಕಿ ವಂದಿಸಿದರು. ಕಾರ್ಯಕ್ರಮದಲ್ಲಿ ಎಸ್.ಎಸ್. ಧರ್ಮಾಯತ್, ಮಹೇಶ ಹಿಂಡಿ, ಸಿ.ಪಿ. ಹುಣಶೀಕಟ್ಟಿ, ಸಿ.ಕೆ. ಜಾಲಿ, ಡಾ. ವ್ಹಿ.ಸಿ. ಕಲ್ಮಠ, ಎಸ್.ವ್ಹಿ. ಕುಂಬಾರ, ಎಂ.ಎಸ್. ಕುಂದ್ರಾಳಹಿರೇಮಠ, ಡಾ. ಯು.ವ್ಹಿ. ಪುರದ, ಡಾ. ಶೇಖರ ಸಜ್ಜನ, ಎಸ್.ಎಚ್. ಪಾಟೀಲ, ಡಾ. ಪಿ.ಎಸ್. ಉಗಲಾಟ, ವ್ಹಿ.ಆರ್. ತಿರ್ಲಾಪೂರ ಉಪಸ್ಥಿತರಿದ್ದರು.