ಸಚಿವ ರಾಜಣ್ಣ ಆರೋಪಕ್ಕೆ ಸಿಎಂ ಸರಿಯಾಗಿ ಉತ್ತರ ನೀಡಿಲ್ಲ: ಆರ್‌ ಅಶೋಕ್‌

0
Spread the love

ಬೆಂಗಳೂರು: ಸಚಿವ ರಾಜಣ್ಣ ಆರೋಪಕ್ಕೆ ಸಿಎಂ ಸರಿಯಾಗಿ ಉತ್ತರ ನೀಡಿಲ್ಲ ಎಂದು ವಿಪಕ್ಷ ನಾಯಕ ಆರ್‌ ಅಶೋಕ್‌ ಹೇಳಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜಣ್ಣ ಅವರೇ ಸದನದಲ್ಲಿ 48 ಜನರ ಮೇಲೆ ಹನಿಟ್ರ‍್ಯಾಪ್ ಆಗಿದೆ ಅಂದಿದ್ದಾರೆ. ಈ ಆರೋಪಕ್ಕೆ ಸಿಎಂ ಸರಿಯಾಗಿ ಉತ್ತರ ನೀಡಿಲ್ಲ.

Advertisement

ಇದು ಗಂಭೀರ ಪ್ರಕರಣ, ಎಲ್ಲ ಶಾಸಕರ, ಸದನದ, ರಾಜ್ಯದ ಗೌರವದ ಪ್ರಶ್ನೆ. ಸಿಬಿಐ ಅಥವಾ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು. ಹನಿಟ್ರ‍್ಯಾಪ್ ವಿಚಾರ ಸದನದಲ್ಲಿ ಪ್ರಸ್ತಾಪ ಆಗಿದ್ದು ಒಂದು ಗ್ಯಾಂಗ್‌ ಮಾಡಿದೆ ಎಂದು ಹೇಳಿದ್ದಾರೆ.

ಏನಿದು ಕಳ್ಳಾಟ ನಡೆಯುತ್ತಿದ್ಯಾ? ರಾಜಣ್ಣ ಹೇಳಿಕೆ ಸದನದ ಆಸ್ತಿ ಎಂದರು. ರಾಜಣ್ಣ ಸಾಮಾನ್ಯ ವ್ಯಕ್ತಿಯಲ್ಲ. ಅವರು ಸರ್ಕಾರದ ಮಂತ್ರಿಯಾಗಿದ್ದಾರೆ. ಅವರೇ ಸದನದಲ್ಲಿ ಆರೋಪ ಮಾಡಿದ್ದಾರೆ. ಈ ಸರ್ಕಾರದಲ್ಲಿ ದಲಿತ ಮಂತ್ರಿಗಳಿಗೆ ರಕ್ಷಣೆ ಇಲ್ಲ ಎಂದು ಕಿಡಿಕಾರಿದರು.

 


Spread the love

LEAVE A REPLY

Please enter your comment!
Please enter your name here