ಬೆಳಗಾವಿ: ಸಿಎಂ ಸಿದ್ದರಾಮಯ್ಯ ಅಧಿಕಾರದ ದರ್ಪದಿಂದ ನಡೆದುಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿಕಾರಿದ್ದಾರೆ. ಲಿಂಗಾಯತ ಪಂಚಮಸಾಲಿಗೆ 2ಎ ಮೀಸಲಾತಿ ನೀಡಬೇಕೆಂದು ಆಗ್ರಹಿಸಿ ನಡೆಯುತ್ತಿರುವ ಹೋರಾಟದ ವೇಳೆ ಬೆಳಗಾವಿಯಲ್ಲಿ ಲಾಠಿಚಾರ್ಜ್ ಮಾಡಿದ್ದನ್ನು ಖಂಡಿಸಿ ಬೆಳಗಾವಿಯಲ್ಲಿ ಮಾತನಾಡಿದ ಅವರು,
ಮೀಸಲಾತಿ ಹೋರಾಟ ಕೈಗೊಂಡಾಗ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಲು ಏನು ದಾಡಿಯಾಗಿತ್ತು. ಪ್ರತಿಭಟನಾಕಾರರ ಬಳಿ ಹತ್ತು ಹೆಜ್ಜೆ ಹೋಗಿ ಭೇಟಿ ಮಾಡಲು ಏಕೆ ಆಗಿಲ್ಲ? ಸಿಎಂ ಇಲ್ಲೇ ಸುವರ್ಣಸೌಧದಲ್ಲಿ ಇದ್ದಗಾಲೂ ಸ್ವಾಮೀಜಿಯನ್ನು ಭೇಟಿಯಾಗುವ ವ್ಯವದಾನ ತೋರಿಲ್ಲ. ಸರ್ಕಾರ ಚೆನ್ನಮ್ಮನ ನಾಡಿನಲ್ಲಿ ರಕ್ತ ಹರಿಸುವ ಕೆಲಸ ಮಾಡಿದೆ.
ಯಾವ ಕಾರಣಕ್ಕೆ ಲಾಠಿ ಪ್ರಹಾರ ಮಾಡಿದೆ. ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು. ಅಮಾಯಕರ ಮೇಲೆ ಲಾಠಿ ಪ್ರಹಾರ ಮಾಡಿದ್ದಾರೆ. 138 ಶಾಸಕರು ಇದ್ದೇವೆ. ಮುಂದೆ ನಾವೇ ಅಧಿಕಾರದಲ್ಲಿ ಇರುತ್ತೇವೆ ಎಂಬ ಭ್ರಮೆಯಲ್ಲಿ ಈ ರೀತಿ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.