ಕಲಬುರಗಿ: ಸಿಎಂ ಸಿದ್ದರಾಮಯ್ಯ ಒಲ್ಲದ ಮನಸ್ಸಿನಿಂದ ಖರ್ಗೆಗೆ ಸಪೋಟ್೯ ಮಾಡುತ್ತಿದ್ದಾರೆ ಎಂದು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ. ಕಲಬುರಗಿಯಲ್ಲಿ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆ ಕಂಡ್ರೆ ಇಲ್ಲಿನ ಪೊಲೀಸರು ಗಢಗಢ ನಡುಗುತ್ತಾರೆ.
ಪ್ರಿಯಾಂಕ್ ಖರ್ಗೆ ಅವರೇ ಎಲ್ಲೆಲ್ಲಿ ಹೋರಾಟ ಮಾಡಿದ್ದೀರಿ ತೋರಿಸಿ. ಸಿಎಂ ಸಿದ್ದರಾಮಯ್ಯ ಒಲ್ಲದ ಮನಸ್ಸಿನಿಂದ ಸಪೋಟ್೯ ಮಾಡುತ್ತಿದ್ದಾರೆ. ಇಲ್ಲಿ ಸಪೋರ್ಟ್ ಮಾಡಿಲ್ಲ ಅಂದರೆ ಅಲ್ಲಿ ತಮ್ಮ ಕುರ್ಚಿ ಅಲುಗಾಡುತ್ತೆ ಎಂದಿದ್ದಾರೆ.
ಇನ್ನೂ ಕಾಂಗ್ರೆಸ್ಸಿಗರೇ ನಿಮ್ಮಲ್ಲಿ 3 ಬಾರಿ ಗೆದ್ದ ಅನೇಕ ದಲಿತರು ಶಾಸಕರಿದ್ದಾರೆ. ಅವರನ್ನೇಕೆ ಮಂತ್ರಿ ಮಾಡಿಲ್ಲ. ಮಲ್ಲಿಕಾರ್ಜುನ ಖರ್ಗೆ ಬಗ್ಗೆ ಗೌರವವಿದೆ, ಅವರ ಬಗ್ಗೆ ಮಾತನಾಡಲ್ಲ. ಖರ್ಗೆ ಸಾಹೇಬ್ರೆ ನೀವು ಧರ್ಮಸಿಂಗ್ ಅವರು ಸ್ನೇಹಿತರಿದ್ದೀರಿ.
ಅವರ ಮಗ ಡಾ.ಅಜಯ್ ಸಿಂಗ್ ಸತತ ಮೂರು ಭಾರಿ ಗೆದ್ದಿದ್ದಾರೆ. ಅವರನ್ನೇಕೆ ಮಂತ್ರಿ ಮಾಡಿಲ್ಲ. ನಿಮ್ಮ ಮಗ ಎಲ್ಲರಿಗಿಂತ ಮೇದಾವಿಯಾ? ಇಲ್ಲಿ ಜಾತಿ, ಧರ್ಮವಿಲ್ಲ ಮಾನವೀಯತೆ ಮುಖ್ಯ. ಸಚಿನ್ ಕಟುಂಬಕ್ಕೆ ನ್ಯಾಯ ಕೊಡಬೇಕು. ನಿಮ್ಮ ಉಸ್ತುವಾರಿಯ ಕಲಬುರಗಿಯಲ್ಲಿ ಅರಾಜಕತೆ ನಡೆಯುತ್ತಿದೆ ಎಂದು ಹೇಳಿದ್ದಾರೆ.