ಬೆಂಗಳೂರು:- ನವೆಂಬರ್ ಕ್ರಾಂತಿ, ರಾಜಕೀಯ ಸಂಕ್ರಾಂತಿ ಇತ್ಯಾದಿ ಅಂತೆ-ಕಂತೆಗಳ ನಡುವೆ ಇಂದು(ಸೋಮವಾರ) ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ಡಿನ್ನರ್ ಮೀಟ್ ಮಾಡಿದ್ದಾರೆ.
ಇನ್ನೂ ಡಿನ್ನರ್ ನಲ್ಲಿ ವೆಜ್ ಮತ್ತು ನಾನ್ ವೆಜ್ ಕೂಡ ಇತ್ತು. ಹಲವು ಸಚಿವರು ಡಿನ್ನರ್‌ಗೆ ಬಂದ್ರೆ, ಮತ್ತೆ ಕೆಲವರು ಗೈರಾಗಿದ್ದಾರೆ. ಇದರ ನಡುವೆ ಹಲವರು ಹಾಗೆ ಬಂದು, ಹೀಗೆ ಹೋಗಿದ್ದಾರೆ. ಇನ್ನು ಡಿನ್ನರ್ ಮೀಟಿಂಗ್‌ನಲ್ಲಿ ಸಚಿವರಿಗೆ ಸಿಎಂ ಸಿದ್ದರಾಮಯ್ಯ ಕೆಲವು ಸೂಚನೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಊಟದ ಜೊತೆ ಬಿಸಿ ಬಿಸಿ ಚರ್ಚೆಗಳು ನಡೆದಿವೆ. ಅದರಲ್ಲೂ ಪ್ರಮುಖವಾಗಿ ಸರ್ಕಾರಿ ಆಸ್ತಿಗಳಲ್ಲಿ RSS ಚಟುವಟಿಕೆಗೆ ನಿರ್ಬಂಧ, , ಸಚಿವ ಸಂಪುಟ ಪುನರ್ ರಚನೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಚುನಾವಣೆ. ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ, ಸಾಮಾಜಿಕ & ಶೈಕ್ಷಣಿಕ ಸಮೀಕ್ಷೆ, ಬಿಹಾರ್ ವಿಧಾನಸಭೆ ಚುನಾವಣೆ ಹಾಗೂ ಅನುದಾನ ಬಳಕೆ ಸೇರಿದಂತೆ ಇನ್ನಿತರ ವಿಚಾರಗಳ ಬಗ್ಗೆ ಚರ್ಚೆಯಾಗಿದೆ ಎಂದು ತಿಳಿದುಬಂದಿದೆ.
ಸರ್ಕಾರ ಬಂದು ಎರಡೂವರೆ ವರ್ಷ ಆಗುತ್ತಿದೆ. ಇದು ನಿಮಗೂ ಗೊತ್ತಿರೋದೆ. ಆದರೆ ನಿಮ್ಮ ಇಲಾಖೆಗಳಲ್ಲಿ ಸುಧಾರಣೆ ತನ್ನಿ. ಬಿಜೆಪಿ ದುರಾಡಳಿತವನ್ನ ನೋಡಿ ಜನ ನಮ್ಮ ಕೈ ಹಿಡಿದಿದ್ದಾರೆ. ಜನಸಾಮಾನ್ಯರ ಪರ ಸರ್ಕಾರ ಇರಬೇಕಾಗುತ್ತದೆ. ಇಲಾಖೆಗಳ ಮೂಲಕ ಜನರ ಕೆಲಸ ಮಾಡಿ. ಇಲಾಖೆಗೂ ಒಳ್ಳೆಯ ಹೆಸರು ತನ್ನಿ, ಸರ್ಕಾರಕ್ಕೂ ಉತ್ತಮ ಹೆಸರು ತನ್ನಿ. ಗ್ಯಾರೆಂಟಿಗಳಿಂದ ಸ್ವಲ್ಪ ಅಭಿವೃದ್ಧಿ ಹಿನ್ನಡೆಯಾಗಿರಬಹುದು. ಈಗ ಎಲ್ಲವೂ ಒಂದು ಹಂತಕ್ಕೆ ಬರುತ್ತಿದೆ. ಆದಾಯದ ಮಾರ್ಗಗಳೂ ಓಪನ್ ಆಗುತ್ತಿವೆ. ಇಲಾಖೆಯಲ್ಲಿರುವ ಹಣ ಸದ್ಬಳಕೆ ಮಾಡಿ. ಅಭಿವೃದ್ಧಿಗೆ ಹೆಚ್ಚುವರಿ ಅನುದಾನ ಕೊಡೋಣ ಎಂದು ಎಂದರು.
ಔತಣಕೂಟದಲ್ಲಿ ಬಿಹಾರ್ ಚುನಾವಣೆ ಬಗ್ಗೆ ಚರ್ಚೆಯಾಗಿದ್ದು, ಬಿಹಾರ ಚುನಾವಣೆಗೆ ಎಲ್ಲರ ಸಹಕಾರವಿರಲಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಪಕ್ಷದ ಹೈಕಮಾಂಡ್‌ನಿಂದ ಯಾವಾಗ ಬೇಕಾದ್ರೂ ಸೂಚನೆ ಬರಬಹುದು. ಹೈಕಮಾಂಡ್‌ನಿಂದ ಸೂಚನೆ ಬಂದಾಗ ಪ್ರಚಾರಕ್ಕೆ ಅಲ್ಲಿಗೆ ಹೋಗಬೇಕಾಗುತ್ತದೆ. ಚುನಾವಣಾ ಕೆಲಸಕ್ಕೂ ರೆಡಿ ಇರಬೇಕು. ನಿಮ್ಮ ಎಲ್ಲಾ ಸಹಕಾರವೂ ಬೇಕಿದೆ ಎಂದಿದ್ದಾರೆ.
ಸಂಪುಟ ಪುನಾರಚನೆ ವಿಚಾರವನ್ನ ಖುದ್ದು ಸಿಎಂ ಸಿದ್ದರಾಮಯ್ಯ ಪ್ರಸ್ತಾಪಿಸಿದ್ದು, ಸಂಪುಟ ಪುನಾರಚನೆ ಆಗಲಿದೆ, ಸಿದ್ಧವಾಗಿರಿ ಎಂದು ಸಂಪುಟ ಸಹದ್ಯೋಗಿಗಳಿಗೆ ಸ್ಪಷ್ಟವಾಗಿ ಹೇಳಿದ್ದಾರೆ. ಅವಕಾಶ ಇದ್ದಾಗ ಚೆನ್ನಾಗಿ ಕೆಲಸ ಮಾಡಿ. ಹೈಕಮಾಂಡ್ ಕೂಡ ಎಲ್ಲವನ್ನ ಗಮನಿಸುತ್ತಿದೆ. ಸಂಪುಟ ಪುನರ್ ರಚನೆ ಮಾಧ್ಯಮಗಳ ವರದಿ. ಅದರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಸಮಯ ಬಂದಾಗ ವರಿಷ್ಠರು ನಿರ್ಧಾರ ಮಡುತ್ತಾರೆ. ಈಗ ಅಭಿವೃದ್ಧಿಯ ಕಡೆ ನಿಮ್ಮ ಗಮನವಿರಲಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ತೆರಳಿದ ಬಳಿಕ ಸಚಿವರಿಗೆ ಸಿಎಂ ಕಿವಿಮಾತು ಹೇಳಿದರು.