ವಿಜಯಸಾಕ್ಷಿ ಸುದ್ದಿ, ಮುಳಗುಂದ : ಇಲ್ಲಿನ ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ ನಂ.1ರಲ್ಲಿ 2024/25ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವ ಸಡಗರ ಸಂಭ್ರಮದಿಂದ ನೆರವೇರಿತು.
ಮಕ್ಕಳಿಗೆ ಗುಲಾಬಿ ಹೂವು, ಸಿಹಿ ಹಾಗೂ ಪೆನ್-ಪೆನ್ಸಿಲ್ ನೀಡಿ ಸ್ವಾಗತಿಸಿದ ಶಾಲಾ ಪ್ರಧಾನ ಗುರು ಪಿ.ಬಿ. ಕೆಂಚನಗೌಡರ ಮಾತನಾಡಿ, 2024/25ನೇ ಸಾಲಿನ ಶೈಕ್ಷಣಿಕ ವರ್ಷ ವರ್ಷದ ಗುಣಮಟ್ಟದ ಶಿಕ್ಷಣದ ಧ್ಯೇಯದೊಂದಿಗೆ ಪ್ರಾರಾಂಭವಾಗಿದ್ದು, ಸರಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಉಚಿತ ಪುಸ್ತಕ, 2 ಜೊತೆ ಸಮವಸ್ತ್ರ, ಕ್ಷೀರ ಭಾಗ್ಯ, ಶೂ&ಸಾಕ್ಸ್, ಉಚಿತ ಪ್ರವೇಶ, ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. 5 ವರ್ಷ 6 ತಿಂಗಳ ತುಂಬಿರುವ ಮಗುವನ್ನು ಸರಕಾರಿ ಶಾಲೆಗೆ ದಾಖಲಾತಿ ಮಾಡಿ ಮಕ್ಕಳ ಉಜ್ವಜ ಭವಿಷ್ಯಕ್ಕೆ ಪಾಲಕರು ಸಹಕರಿಸಬೇಕು ಎಂದರು.
ಎಸ್‌ಡಿಎಂಸಿ ಅಧ್ಯಕ್ಷ ವಿ.ಡಿ. ಸಿದ್ದನಗೌಡರ, ಸಿಆರ್‌ಪಿ ಎಂ.ಎಂ. ನಿಂಬನಾಯ್ಕರ್, ಶಿಕ್ಷಕರಾದ ಎಂ.ಎಂ. ಮೆಗಲಮನಿ, ಎಂ.ಎಂ. ಕೊಪ್ಪಳ, ಕೆ.ಎಂ. ಹೆರಕಲ್ಲ, ಎಚ್.ಆರ್. ಭಜೆಂತ್ರಿ, ಎಸ್.ಎಚ್. ಉಪ್ಪಾರ, ವಿ.ಎಂ. ಕಂಠಿ, ವಿ.ಎಸ್. ಹಿರೇಮಠ, ಟಿ.ವೀಣಾ, ಎಸ್.ಡಿ. ಪಂಡಿತ, ಜ್ಯೋತಿ ಜಾಧಾವ, ಎಸ್‌ಡಿಎಂಸಿ ಸದಸ್ಯರಾದ ಜಿ.ಎಂ. ಗಾಡಿ, ಮಂಜುನಾಥ ಗುಲಗಂಜಿ, ಶಿವಪ್ಪ ಮಡ್ಡಿ, ದಾವಲಬಿ ಗಾಡಿ, ಪೀರದೋಷ ಶಿದ್ದಿ, ಅಡುಗೆ ಸಿಬ್ಬಂದಿ ಸಂಕಮ್ಮಾ ಯಳವತ್ತಿ, ಮೇಹಬೂಬಿ ಹೊಸೂರ, ಲಕ್ಷ್ಮಿ ಬೇಂದ್ರೆ, ರೇಣುಕಾ ಕಬಾಡಿ ಇದ್ದರು.