ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ: ಉಚಿತ ಆರೋಗ್ಯ ತಪಾಸಣಾ ಶಿಬಿರಗಳು ನಮ್ಮ ಊರಿನಲ್ಲಿ ಹೆಚ್ಚು ಹೆಚ್ಚು ನಡೆಯಬೇಕಿದೆ ಎಂದು ಕಾಂಗ್ರೆಸ್ ಮುಖಂಡ ಶಿವಕುಮಾರ್ ಸ್ವಾಮಿ ಹೇಳಿದರು.
ತಾಲೂಕಿನ ಉಚ್ಚಂಗಿದುರ್ಗ ಗ್ರಾಮದ ಗ್ರಾಮ ಪಂಚಾಯಿತಿ ಸಭಾಂಗಣದಲ್ಲ್ಲಿ ಗುರುವಾರ ಎಸ್.ಎಸ್. ನಾರಾಯಣ ಹೆಲ್ತ್ ಸೂಪರ್ ಸ್ಪೆಷಾಲಿಟಿ ಸೆಂಟರ್ ದಾವಣಗೆರೆ, ಸಮೃದ್ಧಿ ಸಂಸ್ಥೆ ಹಳೇಕಡ್ಲೇಬಾಳು, ನಾಗರಸನಹಳ್ಳಿ ವೀರೇಶ್, ಎನ್.ಪಿ. ದೇವರಬೆಳಕೆರೆ ಹಾಗೂ ಗ್ರಾ.ಪಂ ಇವುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಉಚಿತ ಹೃದಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಊರಿನ ಹಾಗೂ ಸುತ್ತಮುತ್ತಲಿನ ಹಳ್ಳಿಯ ಜನರು ಬಡವರಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ಎಸ್.ಎಸ್. ಆಸ್ಪತ್ರೆಯಲ್ಲಿ ಬಂದಾಗ ಉಚಿತವಾಗಿ ತಪಾಸಣೆ ನೀಡಿ, ಶಿಬಿರಕ್ಕೆ ಬೇಕಾಗುವ ಮೂಲಭೂತ ಸೌಕರ್ಯಗಳನ್ನು ನಮ್ಮ ಊರಿನ ವಿಭಾಗದಿಂದ ನೀಡುತ್ತೇವೆ ಎಂದು ಹೇಳಿದರು.
ಡಾ. ರಾಕೇಶ್ ಹೇಳಿದರು, ಹೃದಯವು ನಿರಂತರವಾಗಿ ಕೆಲಸ ಮಾಡುವ ಒಂದು ಪ್ರಮುಖ ಅಂಗ. ಅದರ ಕಾಳಜಿ ವಹಿಸುವುದು ಬಹಳ ಮುಖ್ಯ. ಇತ್ತೀಚಿನ ದಿನಗಳಲ್ಲಿ ಹೃದಯಘಾತಗಳು ಹೆಚ್ಚಾಗಿದ್ದು, ಮುಂಜಾಗೃತಾ ಕ್ರಮವಾಗಿ ತಪಾಸಣೆ ಮಾಡಿಸಬೇಕು. ಇತ್ತೀಚಿನ ದಿನಗಳಲ್ಲಿ ಯಾವ ಕಾಯಿಲೆಗಳು, ಯಾವ ಕಾರಣಕ್ಕೆ ಬರುತ್ತವೆ ಎಂಬುದು ಗೊತ್ತಾಗುವುದಿಲ್ಲ. ಈ ಶಿಬಿರದಲ್ಲಿ ಬಿ.ಪಿ, ಸಕ್ಕರೆ ಕಾಯಿಲೆ, ಇಸಿಜಿ ತಪಾಸಣೆಗೆ ಒಳಪಡಿಸಲಾಗುವುದು. ಈ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಗ್ರಾ.ಪಂ ಉಪಾಧ್ಯಕ್ಷ ಮಡ್ರಳ್ಳಿ ಕೆಂಚಪ್ಪ, ಸದಸ್ಯರಾದ ಸಾಕಮ್ಮ ಸಿದ್ದಪ್ಪ, ಗಂಗಮ್ಮ ರಮೇಶ್, ಮಮತ ಸಿದ್ದೇಶ್, ಪೂಜಾರ್ ದಂಡ್ಯಪ್ಪ, ಪಿಡಿಒ ಶಿವಕುಮಾರ್ ನಾಯ್ಕ್, ಡಾ. ಶಕುಂತಲಾ, ಡಾ. ಹಂಸ, ಗೌರಿ ಅಶೋಕ್, ಸಮೃದ್ಧಿ ಸಂಸ್ಥೆ ಹಳೇ ಕಡ್ಲೆಬಾಳು, ಈರಣ್ಣ ನಾರಾಯಣ ಆಸ್ಪತ್ರೆಗೆ, ಆಶಾ ಕಾರ್ಯಕರ್ತೆಯರು, ಸಿಬ್ಬಂದಿ ವರ್ಗ ಹಾಗೂ ಗ್ರಾಮಸ್ಥರು ಹಾಜರಿದ್ದರು.
ಗ್ರಾ.ಪಂ ಉಪಾಧ್ಯಕ್ಷ ಮಡ್ರಳ್ಳಿ ಕೆಂಚಪ್ಪ ಹೇಳಿದರು, ಇತ್ತೀಚೆಗೆ 30-40 ವಯಸ್ಸಿನವರಿಗೂ ಹೃದಯಾಘಾತದ ಸಮಸ್ಯೆ ಕಾಡುತ್ತಿದೆ. ಈ ಸಮಸ್ಯೆಯ ಪರಿಹಾರಕ್ಕಾಗಿ ಇಂತಹ ಶಿಬಿರ ಆಯೋಜನೆಯಾಗಿದ್ದು ಸಂತೋಷದ ಸಂಗತಿ. ಯುವಕರು, ವೃದ್ಧರು, ಹೆಣ್ಣುಮಕ್ಕಳು ಸೇರಿದಂತೆ ವಿವಿಧ ವಯಸ್ಸಿನ ಜನರು ಇದರ ಸದ್ಉಪಯೋಗ ಪಡೆದುಕೊಂಡಿದ್ದಾರೆ ಎಂಬುದರಲ್ಲದೆ, ಶಿಬಿರ ಆಯೋಜಿಸಿದ ಎಸ್.ಎಸ್. ನಾರಾಯಣ ಹೆಲ್ತ್ ಸೂಪರ್ ಸ್ಪೆಷಾಲಿಟಿ ಸೆಂಟರ್-ಗೆ ಧನ್ಯವಾದ ಅರ್ಪಿಸಿದರು.



