ಬೆಂಗಳೂರು: ಕಿತ್ತಾಟದಿಂದ ಕಾಂಗ್ರೆಸ್ ಸರ್ಕಾರ ಸರ್ವನಾಶ ಆಗೋದು ಗ್ಯಾರಂಟಿ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಒಡೆದ ಮನೆ ಆಗಿದೆ. ಬೆಳಗಾವಿಯ ರಾಜಕಾರಣದಿಂದಲೇ ಈ ಸರ್ಕಾರ ಸರ್ವನಾಶವಾಗಲಿದೆ.
Advertisement
ಹಿಂದೆ ಬೆಳಗಾವಿಯಿಂದಲೇ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಪತನ ಆಗಿತ್ತು. ಅದೇ ರೀತಿಯಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಸತೀಶ್ ಜಾರಕಿಹೊಳಿ ಕಿತ್ತಾಟದಿಂದ ಕಾಂಗ್ರೆಸ್ ಸರ್ಕಾರ ಸರ್ವನಾಶ ಆಗೋದು ಗ್ಯಾರಂಟಿ ಎಂದು ಆರ್ ಅಶೋಕ್ ಭವಿಷ್ಯ ನುಡಿದಿದ್ದಾರೆ.
ಇನ್ನೂ ಸಿಎಂ ಸ್ಥಾನಕ್ಕಾಗಿ ನಡೆಯುತ್ತಿರುವ ಕಾಂಗ್ರೆಸ್‌ನಲ್ಲಿನ ಒಳ ರಾಜಕಾರಣದ ಬಗ್ಗೆ ವಿಚಾರಕ್ಕೆ ಮುಂದೆಯೂ ನೀವೇ ಬರೋದಾದರೆ, ಸಿಎಂ ಖರ್ಚಿಗೆ ಯಾಕೆ ಕಿತ್ತಾಡ್ತಿದೀರಿ? ನೀವು ಕಿತ್ರಾಡೋದು ನೋಡಿದ್ರೆ ಖುರ್ಚಿಯ ಕಾಲುಗಳನ್ನು ಎಲ್ಲಿ ಕಿತ್ತಾಕ್ತೀರೋ ಅಂತಾ ಆತಂಕ ಆಗ್ತಿದೆ ಎಂದು ಕಾಲೆಳೆದಿದ್ದಾರೆ.