ಕಾಂಗ್ರೆಸ್ ಸರ್ಕಾರ ಬಡವರ ಪರವಾಗಿದೆ : ಆನಂದಸ್ವಾಮಿ

0
congress
Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದ್ದೇವರಮಠ ರೋಣ ವಿಧಾನಸಭಾ ಮತಕ್ಷೇತ್ರದ ನರೇಗಲ್ಲಿನಲ್ಲಿ ಇತ್ತೀಚೆಗೆ ರೋಡ್ ಶೋ ನಡೆಸಿ ಮತಯಾಚಿಸಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಿಧಾನಸಭಾ ಚುನಾವಣೆಯ ಸಂಧರ್ಭದಲ್ಲಿ ಕಾಂಗ್ರೆಸ್ ಪಕ್ಷ ಕರ್ನಾಟಕದ ಜನತೆಗೆ ಐದು ಗ್ಯಾರಂಟಿಗಳನ್ನು ನೀಡಿ ಅವುಗಳನ್ನು ತಕ್ಷಣ ನೆರವೇರಿಸಿದ ಹೆಗ್ಗಳಿಕೆ ಕಾಂಗ್ರೆಸ್ ಸರ್ಕಾರಕ್ಕಿದೆ. ಈ ರಾಜ್ಯವನ್ನು ಹಸಿವು ಮುಕ್ತ ರಾಜ್ಯವನ್ನಾಗಿಸುವ ಉದ್ದೇಶ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರಕಾರದ್ದು. ಕಾಂಗ್ರೆಸ್ ಸರ್ಕಾರ ಬಡವರ ಪರವಾಗಿದ್ದು, ಜನಸಾಮಾನ್ಯರ ಹಿತ ರಕ್ಷಣೆಗೆ ಬದ್ಧವಾಗಿದೆ ಎಂದರು.

ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ರೋಣ ಮತಕ್ಷೇತ್ರದ ಶೇ.90 ಜನರಿಗೆ ಈಗಾಗಲೇ ಸರಕಾರದ ಗ್ಯಾರಂಟಿಗಳು ತಲುಪಿವೆ. ಕ್ಷೇತ್ರದ ಜನರ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಮತಕ್ಷೇತ್ರದ ಎಲ್ಲ ಕೆರೆಗಳನ್ನು ತುಂಬಿಸುವ ಯೋಜನೆಯನ್ನು ಈಗಾಗಲೇ ರೂಪಿಸಿದ್ದು, ಸರಕಾರದ ಅನುಮತಿ ದೊರಕಿದೆ. ಚುನಾವಣೆ ಮುಗಿದ ನಂತರ ಈ ಕಾರ್ಯವನ್ನು ಕೈಗೆತ್ತಿಕೊಳ್ಳುತ್ತೇವೆ ಎಂದು ಹೇಳಿದರು.

ಕಾಂಗ್ರೆಸ್ ಮುಖಂಡ ಟಿ.ಈಶ್ವರ ಅಭ್ಯರ್ಥಿಯ ಪರ ಮತ ಯಾಚಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಸಿದ್ದಣ್ಣ ಬಂಡಿ, ಡಾ. ಕೆ.ಬಿ. ಧನ್ನೂರ, ಎಸ್.ಎ. ಪಾಟೀಲ, ಎಚ್.ಎಸ್. ಸೋಂಪೂರ, ವಿ.ಬಿ. ಸೋಮನಕಟ್ಟಿಮಠ, ವಿ.ಬಿ. ಗುಡಿಸಾಗರ, ವೀರಣ್ಣ ಶೆಟ್ಟರ, ಎಂ.ಎಸ್. ಧಡೇಸೂರಮಠ, ಶರಣಪ್ಪ ಬೆಟಗೇರಿ, ಶೇಖಪ್ಪ ಜುಟ್ಲ, ನಿಂಗನಗೌಡ ಲಕ್ಕನಗೌಡ್ರ, ಶರಣಪ್ಪ ಗಂಗರಗೊಂಡ, ಮಲ್ಲಿಕಾರ್ಜುನ ಪಾಟೀಲ, ಗುರುರಾಜ ಕುಲಕರ್ಣಿ, ವಿನಾಯಕ ಗ್ರಾಮಪುರೋಹಿತ, ಕಳಕನಗೌಡ ಪೊಲೀಸ್ ಪಾಟೀಲ, ಶೇಖಪ್ಪ ಕೆಂಗಾರ, ಮೈಲಾರಪ್ಪ ಚಳ್ಳಮರದ, ಅಲ್ಲಾಭಕ್ಷಿ ನದಾಫ, ಹನಮಮಂತ ಅಬ್ಬಿಗೇರಿ, ನಿಂಗಪ್ಪ ಹೊನ್ನಾಪೂರ, ನಜೀರ ಹದ್ಲಿ, ಎ.ಆರ್. ಮಲ್ಲನಗೌಡ್ರ, ಬಸವರಾಜ ಅಬ್ಬಿಗೇರಿ, ಹನಮಂತ ದ್ವಾಸಲ, ಅಂದಪ್ಪ ಬಿಚ್ಚೂರ ಸೇರಿದಂತೆ ಕಾರ್ಯಕರ್ತರು ಇದ್ದರು.


Spread the love

LEAVE A REPLY

Please enter your comment!
Please enter your name here