HomeBengaluru Newsಸೆನ್ಸಾರ್‌ಗೆ ಸಿದ್ಧವಾಗುತ್ತಿದೆ ‘ತಂತ್ರ’

ಸೆನ್ಸಾರ್‌ಗೆ ಸಿದ್ಧವಾಗುತ್ತಿದೆ ‘ತಂತ್ರ’

Spread the love

ವಿಜಯಸಾಕ್ಷಿ ಸುದ್ದಿ, ಬೆಂಗಳೂರು : ಸಿಲ್ವರ್ ಸ್ಕೈ ಪ್ರೊಡಕ್ಷನ್ ಸಿನಿಮಾ ಸಂಸ್ಥೆ ನಿರ್ಮಿಸುತ್ತಿರುವ ಕುತೂಹಲಭರಿತ ‘ತಂತ್ರ’ ಚನಲಚಿತ್ರ ಚಿತ್ರೀಕರಣ ಮುಗಿಸಿ ಇದೀಗ ತೆರೆಗೆ ಬರಲು ಸಿದ್ಧವಾಗಿದೆ.

ವಿಜಯಪುರದ ಶಶಿಕಾಂತ್ ನಾಟಿಕರ್ ಈ ಚಿತ್ರದಲ್ಲಿ ನಾಯಕ, ನಿರ್ಮಾಪಕರಾಗಿದ್ದಾರೆ. ನಾಯಕಿಯರಾಗಿ ಸೌಜನ್ಯ ಮತ್ತು ಮೇಘಾ, ಎರಡನೇ ನಾಯಕನಾಗಿ ನಟ ವಿಕ್ರಾಂತ್, ಪ್ರಮುಖ ಪಾತ್ರದಲ್ಲಿ ಸಾಮ್ರಾಟ್ ನಟಿಸುತ್ತಿದ್ದಾರೆ. ಪಾರು ದಾವಣಗೆರೆ ವಿಶೇಷವಾದ ಗೀತೆಯಲ್ಲಿ ಹೆಜ್ಜೆ ಹಾಕಿದ್ದಾರೆ. ಹಾಸ್ಯ ಪಾತ್ರದಲ್ಲಿ ಜೈ ಅಮೋಘ ದಾಸ್ ನಟಿಸಿ ಗಮನ ಸೆಳೆದಿದ್ದಾರೆ. ಅಲ್ಲದೆ ಸಂತೋಷ್ ಕೇರಿ ಎಂಬ ಜನಪ್ರಿಯ ಯೂಟ್ಯೂಬರ್ ಸಹ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

ಛಾಯಾಗ್ರಹಣ-ರೋಹನ ದೇಸಾಯಿ, ವರ್ಧನ ಬಾಗಲಕೋಟೆ, ಕಥೆ-ವಿಶ್ವನಾಥ, ಶಶಿಕಾಂತ, ಸಾಮ್ರಾಟ, ಚಿತ್ರಕಥೆ, ಸಂಭಾಷಣೆ-ವಿಶ್ವನಾಥ, ಸಾಮ್ರಾಟ, ಸಂಗೀತ ನಿರ್ದೇಶನ-ರಮೇಶ್ ಕೃಷ್ಣ, ರೋಹನ್ ದೇಸಾಯಿ ಅವರದ್ದಿದೆ. ಸಂಕಲನ ಮತ್ತು ಡಿಐ ಓಂ ಸರವಣನ್, ಪತ್ರಿಕಾ ಸಂಪರ್ಕ ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಿಗಿ ಅವರದಿದೆ. ಸಹ ನಿರ್ದೇಶನ ಸಾಮ್ರಾಟ ಶ್ರೀನಿವಾಸ ಎಸ್.ಸಿ, ಅಶೋಕ ಕಂಬ್ಳಿ, ಸಹಾಯಕ ನಿರ್ದೇಶನ ವಿತೇಶ ಮಂಜುನಾಥ ರಾಜ, ಅಜಯ ಎ.ಜೆ, ದುರ್ಗೇಶ (ರಾಯದುರ್ಗ), ಭರಣಿ, ಸುಮಂತ ಕಾಮತ, ಮಂಜುನಾಥ ಬಂಕಾಪೂರ ಮಾಡಿದ್ದಾರೆ. ಗುಳೇದಗುಡ್ಡದ ವಿಶ್ವನಾಥ ಅವರ ನಿರ್ದೇಶನದ ಎರಡನೇ ಚಿತ್ರ ಇದಾಗಿದೆ.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!