HomeEducationಚಾರ್ಟರ್ಡ್ ಅಕೌಂಟೆನ್ಸಿ ಕೋರ್ಸ್ ಜಾಗೃತಿ ಕಾರ್ಯಕ್ರಮ

ಚಾರ್ಟರ್ಡ್ ಅಕೌಂಟೆನ್ಸಿ ಕೋರ್ಸ್ ಜಾಗೃತಿ ಕಾರ್ಯಕ್ರಮ

Spread the love

ವಿಜಯಸಾಕ್ಷಿ ಸುದ್ದಿ, ಗದಗ : ಸ್ಥಳೀಯ ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಬಸವೇಶ್ವರ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯ ಮತ್ತು ಹುಬ್ಬಳ್ಳಿಯ ICAI ಸಹಯೋಗದಲ್ಲಿ SIRC ಅಡಿಯಲ್ಲಿ Chartered Accountancy Course ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಹುಬ್ಬಳ್ಳಿ ಬ್ರಾಂಚಿನ SIRC ಮಾಜಿ ಚೇರಮನ್ ಸಿಎ ಕೆ.ಎಸ್. ಚಟ್ಟಿ, ಮಹೇಶ್ವರಿ ಪಾಟೀಲ ಮಹೇಂದ್ರಕರ ಹಾಗು ಅಧ್ಯಕ್ಷತೆ ವಹಿಸಿದ್ದ ತೋಂಟದಾರ್ಯ ವಿದ್ಯಾಪೀಠದ ಕಾರ್ಯದರ್ಶಿ ಎಸ್.ಎಸ್. ಪಟ್ಟಣಶೆಟ್ಟಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಕೆ.ಎಸ್ ಚೆಟ್ಟಿ ಮಾತನಾಡಿ, ಮಾನವ ಜೀವನದಲ್ಲಿ ಎಲ್ಲಕ್ಕಿಂತ ಜ್ಞಾನವೇ ಬಹುದೊಡ್ಡ ಶಕ್ತಿ. ವಿದ್ಯಾರ್ಥಿಗಳು ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಎಸ್.ಎಸ್. ಪಟ್ಟಣಶೆಟ್ಟಿ ಮಾತನಾಡಿ, ಏಕಾಗ್ರತೆಯಿಂದ ಸತತ ಅಧ್ಯಯನಶೀಲರಾಗಿ, ಸಾಮಾಜಿಕ ಜಾಲತಾಣಗಳನ್ನು ಸದುಪಯೋಗಪಡಿಸಿಕೊಂಡಲ್ಲಿ ಸಿ.ಎ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲು ಸಾಧ್ಯ ಎಂದರು.

ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ SIRC ಹುಬ್ಬಳ್ಳಿ ಬ್ರಾಂಚಿನ ವೈಸ್ ಚೇರಮನ್ ಸಿಎ ಅಕ್ಷಯಕುಮಾರ ಸಿಂಘಿ ಹಾಗೂ ಚೇರಮನ್ ಸಿಎ ಮಲ್ಲಿಕಾರ್ಜುನ ಪಿಸೆ ಅವರನ್ನು ಸನ್ಮಾನಿಸಲಾಯಿತು. ಕಾಗಿನೆಲೆ ವೇದಿಕೆಯ ಮೇಲೆ ಅವರು ಉಪಸ್ಥಿತರಿದ್ದರು.

ಮಂಜುಶ್ರೀ ಹಿರೇಮಠ ಪ್ರಾರ್ಥಿಸಿದರು. ಪ್ರಾ. ಎಂ.ಎಂ. ಬುರಡಿ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ಪ್ರೊ. ಶಿವಕುಮಾರ ಅಣ್ಣಿಗೇರಿ ಕಾರ್ಯಕ್ರಮ ನಿರೂಪಿಸಿದರು. ಪ್ರೊ ಎಸ್.ಐ. ಪಟ್ಟಣಶೆಟ್ಟಿ ವಂದಿಸಿದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!