ಶೀಘ್ರದಲ್ಲೇ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ: ಕೆ ಎಸ್ ಈಶ್ವರಪ್ಪ!

0
Spread the love

ವಿಜಯಪುರ:- ಶೀಘ್ರದಲ್ಲೇ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದು ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ

Advertisement

ಕಾಂಗ್ರೆಸ್ ನಾಯಕರ ಕಣಕಣದಕಲ್ಲಿ ಭಂಡತನ ತುಂಬಿದೆ, ಭ್ರಷ್ಟಾಚಾರ ನಡೆಸಿದರೂ ಭಂಡತನ ಪ್ರದರ್ಶಿಸಿ ತಮ್ಮದು ಸಚ್ಛಾರಿತ್ರ್ಯ ಅಂತ ಹೇಳಿಕೊಳ್ಳುತ್ತಾರೆ, ಮೊದಲಿಂದಲೂ ಅವರು ದೇಶವನ್ನು ಲೂಟಿ ಮಾಡೋದು ಬಿಟ್ಟರೆ ಮತ್ತೇನೂ ಮಾಡಿಲ್ಲ, ಎಂದು ಹೇಳಿದರು.

ಕಾಂಗ್ರೆಸ್ ಪಕ್ಷದವರ ಇನ್ನೂ ನಾಲ್ಕು ವರ್ಷ ಅಧಿಕಾರದಲ್ಲಿರುತ್ತೇವೆ ಎಂಬ ಭ್ರಮೆಯಲ್ಲಿದ್ದಾರೆ, ಸರ್ಕಾರ ಪತನಗೊಳ್ಳುವ ದಿನಗಳು ಹತ್ತಿರ ಬಂದಿವೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಜೈಲಿಗೆ ಹೋಗೋದು ಶತಸಿದ್ಧ, ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯುವುದರಲ್ಲಿ ಅನಮಾನವೇ ಬೇಡ ಎಂದು ಈಶ್ವರಪ್ಪ ಹೇಳಿದರು.

ತನ್ನ ಮೇಲೆ ಆರೋಪ ಬಂದಾಗ ಕೂಡಲೇ ಕೇಂದ್ರದ ನಾಯಕರನ್ನು ಸಂಪರ್ಕಿಸಿ ರಾಜೀನಾಮೆ ಸಲ್ಲಿಸುತ್ತೇನೆ ಅನುಮತಿ ನೀಡಿ ಅಂತ ಹೇಳಿದ್ದೆ, ಅದರೆ ಅವರೇ ಅವಸರ ಬೇಡ, ತಾಳ್ಮೆಯಿರಲಿ ಅಂತ ಹೇಳಿದ್ದರು ಎಂದು ಅವರು ಹೇಳಿದರು. ಆದರೆ, ಇಲ್ಲಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್, ನಾನು ರಾಜೀನಾಮೆ ನೀಡಬೇಕು ಅಂತ ಆಕಾಶ ಪಾತಾಳ ಒಂದು ಮಾಡಿದ್ದರು ಎಂದು ಈಶ್ವರಪ್ಪ ಹೇಳಿಕೆ ಕೊಟ್ಟಿದ್ದಾರೆ.


Spread the love

LEAVE A REPLY

Please enter your comment!
Please enter your name here