HomeGadag Newsಖಾಸಗಿ ವಲಯದ ಮುಖ್ಯಸ್ಥರ ವಿರುದ್ಧ ಆಕ್ರೋಶ

ಖಾಸಗಿ ವಲಯದ ಮುಖ್ಯಸ್ಥರ ವಿರುದ್ಧ ಆಕ್ರೋಶ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಮಿಸಲಾತಿಯನ್ನು ವಿರೋಧಿಸುತ್ತಿರುವ ಖಾಸಗಿ ವಲಯದ ಮುಖ್ಯಸ್ಥರ ನಡೆಯನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಗದಗ ಜಿಲ್ಲಾ ಘಟಕದ ಅಧ್ಯಕ್ಷ ದಾವಲಸಾಬ ಮುಳಗುಂದ ನೇತೃತ್ವದಲ್ಲಿ ಗದಗ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ದಾವಲಸಾಬ ಮುಳಗುಂದ ಮಾತನಾಡಿ, ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಖಾಸಗಿ ವಲಯದಲ್ಲಿ 100ಕ್ಕೆ 100ರಷ್ಟು ಸಿ ಮತ್ತು ಡಿ ಗ್ರೂಪ್ ಹುದ್ದೆಗೆ ಆದ್ಯತೆ ನೀಡುವ ವರದಿ ಅನುಷ್ಠಾನ ಮಾಡುತ್ತಿರುವದು ನಮ್ಮೆಲ್ಲ ಕನ್ನಡಿಗೆ ಸಿಕ್ಕ ಜಯ. ಖಾಸಗಿ ವಲಯದ ಮುಖ್ಯಸ್ಥರು ಕನ್ನಡದ ನೆಲದಲ್ಲಿ ಇದ್ದು, ಕನ್ನಡದ ನೆಲ, ಜಲ, ಪರಂಪರೆ, ಸಂಪತ್ತು ಸೌಲಭ್ಯಗಳನ್ನು ಪಡೆದುಕೊಂಡು, ಇಲ್ಲಿಯ ಕನ್ನಡಿಗರಿಗೆ ಮಾಡುತ್ತಿರುವ ಅನ್ಯಾಯವಾಗಿದೆ. ಸರ್ಕಾರ ಯಾವುದೇ ಒತ್ತಡಕ್ಕೆ ಮಣಿಯದೇ ಸರೋಜಿನಿ ಮಹಿಷಿ ವರದಿಯನ್ನು ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ವೆಂಕಟೇಶ ಬೇಲೂರ, ಶ್ರೀನಿವಾಸ ಭಂಡಾರಿ, ಸಹದೇವ ಕೋಟಿ, ಮಹೇಶ್ ಕಲಘಟಗಿ, ಸಿದ್ದಪ್ಪ ಮುದ್ದಾಪೂರ, ತಿಮ್ಮಣ್ಣ ಡೋಣಿ, ರಫೀಕ ಕೇರಿಮನಿ, ಮಣಿಕಂಠ ಭಂಡಾರಿ, ಮಂಜುನಾಥ ಗಾಂಜಿ, ವಾಸು ಗೋಸಾವಿ, ಶ್ರೇಯಾಂಕ ಹಿರೇಮಠ, ಭರಮಣ್ಣ ಗೌಳಿ, ರವಿ ಗುರಿಕಾರ, ಅಮರೇಶ ಗಾಂಜಿ, ಗವಿಸಿದ್ದಪ್ಪ ಆಲೂರ, ಮಾರುತಿ ಉಪ್ಪಾರ, ಗೌಸ, ಮನ್ಸೂರ ಮಕಾನದಾರ, ಹೊಳಿಯಪ್ಪ ಜಂಪಣ್ಣವರ ಸೇರಿದಂತೆ ಕರವೇ ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img