ವಿಜಯಸಾಕ್ಷಿ ಸುದ್ದಿ, ಗದಗ : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದಾಗಿನಿಂದ ರೇಷನ್ ಕಾರ್ಡ್ ಪಡೆಯುವುದೇ ಗಗನ ಕುಸುಮವಾಗಿದೆ. ಸರ್ಕಾರ ಸಾರ್ವಜನಿಕರ ರೇಷನ್ ಕಾರ್ಡ್ ತಿದ್ದುಪಡಿ, ಹೊಸ ಅರ್ಜಿಗೆ ತಿಂಗಳಲ್ಲಿ ಕೇವಲ 2 ದಿನಗಳ ಅವಕಾಶ ಕಲ್ಪಿಸಿಕೊಡುತ್ತಿದೆ. ಆದರೆ, ಸರ್ವರ್, ವಿದ್ಯುತ್ ಸಮಸ್ಯೆಯಿಂದ ಈ ಸೇವೆ ಸಾರ್ವಜನಿಕರಿಗೆ ತಲುಪುತ್ತಿಲ್ಲ ಎಂದು ಕರ್ನಾಟಕ ರೈತ ವಿಕಾಸ ಸಂಘದ ಉತ್ತರ ಕರ್ನಾಟಕ ವಿಭಾಗದ ಅಧ್ಯಕ್ಷ ಶಿರಾಜ ಲಕ್ಕುಂಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Advertisement
ರೇಷನ್ ಕಾರ್ಡ್ ಸಾರ್ವಜನಿಕರಿಗೆ ಸರ್ಕಾರದ ಸೌಲಭ್ಯ ಮತ್ತು ತಮ್ಮ ಮಕ್ಕಳ ಶಿಕ್ಷಣ ಪಡೆಯಲು, ಇನ್ನಿತರ ಯಾವುದೇ ಕೆಲಸಕ್ಕಾಗಿ ಅವಶ್ಯವಾಗಿದೆ. ಆದಷ್ಟು ಬೇಗ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಸರ್ವರ್ ಸಮಸ್ಯೆ ಸರಿಪಡಿಸಿ ಸರಾಗವಾಗಿ ಕೆಲಸಗಳನ್ನು ಪೂರೈಸಿಕೊಳ್ಳಲು ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.