ಕೋವಿಡ್ ಹಗರಣ: ತನಿಖೆಗೆ SIT ರಚನೆ ಮಾಡಲು ಸಂಪುಟ ಅಸ್ತು!

0
Spread the love

ಬೆಂಗಳೂರು:- ಈ ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗ ನಡೆದಿದೆ ಎನ್ನಲಾದ ಸಾವಿರಾರು ಕೋಟಿ ರೂಪಾಯಿ ಕೋವಿಡ್ ಹಗರಣದ ತನಿಖೆಗಾಗಿ ಎಸ್‌ಐಟಿ ರಚಿಸಲು ಸಿಎಂ ನೇತೃತ್ವದ ಸಂಪುಟ ಸಭೆ ತೀರ್ಮಾನಿಸಿದೆ.

Advertisement

ಈ ಬಗ್ಗೆ ಕಾನೂನು ಸಚಿವ ಹೆಚ್‌.ಕೆ ಪಾಟೀಲ್ ಮಾಹಿತಿ ನೀಡಿದ್ದು, ಇನ್ನೂ 2-3 ದಿನಗಳಲ್ಲಿ ಐಜಿ ಮಟ್ಟದ ಅಧಿಕಾರಿ ನೇತೃತ್ವದ ಎಸ್‌ಐಟಿ ರಚನೆ ಆಗಲಿದ್ದು, ಬಳಿಕ ಬಿಎಸ್‌ವೈ ವಿ‌ರುದ್ಧ ಎಫ್‌ಐಆರ್‌ ದಾಖಲಾಗಲಿದೆ ಎಂದರು.

ಇನ್ನೂ ಇದರೊಂದಿಗೆ ಯಡಿಯೂರಪ್ಪ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಕ್ಯಾಬಿನೆಟ್ ಸಚಿವರಿಂದ ಆಗ್ರಹ ಕೇಳಿಬಂದಿದೆ ಎಂದು ಮೂಲಗಳು ತಿಳಿಸಿವೆ.

ನಿವೃತ್ತ ನ್ಯಾಯಮೂರ್ತಿ ಮೈಕಲ್ ಡಿ ಕುನ್ಹಾ ನೇತೃತ್ವದ ಆಯೋಗ ನೀಡಿದ ವರದಿ ಆಧಾರದ ಮೇಲೆ ಸಚಿವ ಸಂಪುಟ ಈ ನಿರ್ಣಯಕ್ಕೆ ಬಂದಿದೆ. ಇದೇ ವೇಳೆ, ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಮಾನ್ಯತೆಗೆ ಷರತ್ತುಗಳನ್ನು ಸಡಿಲ ಮಾಡಲು ಒಪ್ಪಿಗೆ ಸೂಚಿಸಿದೆ.

ಶೇ.50ರಷ್ಟು ಸೀಟುಗಳಿಗೆ ಕಡ್ಡಾಯವಾಗಿ ಅಲ್ಪ ಸಂಖ್ಯಾತ ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಳ್ಳಬೇಕು ಎಂಬ ನಿಯಮಕ್ಕೆ ಕೊಕ್ ನೀಡಿದೆ.


Spread the love

LEAVE A REPLY

Please enter your comment!
Please enter your name here