ಚಿತ್ರದುರ್ಗ:- ಬಟ್ಟೆ ತೊಳೆಯಲು ಹೋಗಿದ್ದ ಮಹಿಳೆಯ ಭೀಕರ ಕೊಲೆಯಾಗಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಉಪ್ಪಿರಿಗೇನಹಳ್ಳಿ ಬಳಿಯ ಹಳ್ಳದಲ್ಲಿ ಜರುಗಿದೆ.
Advertisement
ಇಬ್ಬರು ದುಷ್ಕರ್ಮಿಗಳಿಂದ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಗ್ರಾಮದ 40 ವರ್ಷದ ಲತಾ ಕೊಲೆಯಾದ ಮಹಿಳೆ ಎನ್ನಲಾಗಿದೆ. ಇಂದು ಮಧ್ಯಾಹ್ನ ಬಟ್ಟೆ ತೊಳೆಯಲು ಹಳ್ಳದಲ್ಲಿ ಹೋಗಿದ್ದ ವೇಳೆ ದುಷ್ಕೃತ್ಯ ನಡೆದಿದೆ.
ಆಗುಂತಕರು, ಮೈಮೇಲಿದ್ದ ಒಡವೆ ಕೂಡಾ ಕದ್ದು ಎಸ್ಕೇಪ್ ಆಗಿದ್ದಾರೆ. ಹಳ್ಳದಿಂದ ಸ್ವಲ್ಪ ದೂರ ಎಳೆದೊಯ್ದು ದುಷ್ಕರ್ಮಿಗಳಿಂದ ಕೊಲೆ ನಡೆದಿದೆ.
ಮೈ ಮೇಲೆ ಬಟ್ಟೆಗಳು ಹರಿದ ಸ್ಥಿತಿಯಲ್ಲಿದ್ದು, ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಮಾಹಿತಿ ಆಧರಿಸಿ ಸ್ಥಳಕ್ಕೆ SP ರಂಜಿತ್ ಬಂಡಾರೂ, DYSP ದಿನಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಚಿತ್ರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ ಜರುಗಿದೆ.