ಸಹಕಾರ ಸಂಘದಲ್ಲಿ ಸರಿಯಾಗಿ ಸಾಲ ಸೌಲಭ್ಯ ನೀಡುತ್ತಿಲ್ಲ: ಸಿಟಿ ರವಿ ಆರೋಪ

0
Spread the love

ಬೆಂಗಳೂರು: ಸಹಕಾರ ಸಂಘದಲ್ಲಿ ಸರಿಯಾಗಿ ಸಾಲ ಸೌಲಭ್ಯ ನೀಡುತ್ತಿಲ್ಲ. ಅಗತ್ಯವಾಗಿ ಸಾಲ ಬೇಕಾಗಿರುವವರಿಗೆ ಸಾಲ ಸಿಗುತ್ತಿಲ್ಲ ಎಂದು ಬಿಜೆಪಿ ಸದಸ್ಯ ಸಿಟಿ ರವಿ ಹೇಳಿದ್ದಾರೆ. ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಮಾತನಾಡಿದ ಅವರು, ಸಹಕಾರ ಸಂಘದಲ್ಲಿ ಸರಿಯಾಗಿ ಸಾಲ ಸೌಲಭ್ಯ ನೀಡುತ್ತಿಲ್ಲ. ಅಗತ್ಯವಾಗಿ ಸಾಲ ಬೇಕಾಗಿರುವವರಿಗೆ ಸಾಲ ಸಿಗುತ್ತಿಲ್ಲ. ತಮಗೆ ಬೇಕಾದವರಿಗೆ ಮಾತ್ರ ಸಾಲ ನೀಡುವ ವ್ಯವಸ್ಥೆ ಸಹಕಾರಿ ಬ್ಯಾಂಕುಗಳಲ್ಲಿ ಇವೆ.

Advertisement

ಬಾಗಿಲು ಹಾಕಿಕೊಂಡು ಕಿಟಕಿಯಲ್ಲಿ ವ್ಯವಹಾರ ಮಾಡುವ ವ್ಯವಸ್ಥೆ ಸಹಕಾರಿ ಇಲಾಖೆಯಲ್ಲಿ ಇದೆ ಈ ಬಗ್ಗೆ ಸರ್ಕಾರ ಕ್ರಮವಹಿಸಬೇಕು. ರೈತರ ಸಾಲಮನ್ನಾ ಸರ್ಕಾರ ಮಾಡಬೇಕು. ರಾಜ್ಯದಲ್ಲಿ ಕಳೆದ ಒಂದು ವರ್ಷದಲ್ಲಿ 1 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೀಗಾಗಿ ಸರ್ಕಾರ ರೈತರ ನೆರವಿಗೆ ಬರಬೇಕು. 2023ರ ಭಾಷಣದಲ್ಲಿ ಈ ಸರ್ಕಾರ ರೈತರ ಸಾಲ ಮನ್ನಾ ಮಾಡುವ ಭರವಸೆ ನೀಡಿದ್ದರು. ಹೀಗಾಗಿ ರೈತರ ಸಾಲಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.


Spread the love

LEAVE A REPLY

Please enter your comment!
Please enter your name here