CT Ravi Case: ಡಿಸಿಎಂ, ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಡಿಜಿಪಿ ಅಲೋಕ್ ಮೋಹನ್ʼಗೆ ಸಿಟಿ ರವಿ ದೂರು

0
Spread the love

ಬೆಂಗಳೂರು: ಬೆಳಗಾವಿ ಸದನದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅವಾಚ್ಯ ಪದ ಬಳಕೆ ಆರೋಪ ಪ್ರಕರಣದಲ್ಲಿ ಬಂಧನವಾದ ನಂತರ ರಾಜ್ಯ ರಾಜಕಾರನದಲ್ಲಿ ಅಲ್ಲೋಲ ಕಲ್ಲೋಲವಾಗಿದೆ. ಅತ್ತ ಬಿಜೆಪಿಯವರು ಕಾಂಗ್ರೆಸ್‌ ವಿರುದ್ದ, ಇತ್ತ ಕಾಂಗ್ರೆಸ್‌-ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಲೇ ಇದ್ದಾರೆ.  ಇನ್ನು ಸಿಟಿ ರವಿ-ಲಕ್ಷ್ಮಿ ಹೆಬ್ಬಾಳ್ಕರ್‌ ನಡುವಿನ ಕೇಸ್‌ ಸರ್ಕಾರ ಈಗಾಗಲೇ ಸಿಐಡಿ ಗೆ ಹಸ್ತಾಂತರಿಸಿದೆ.

Advertisement

ಇದೀಗ ಸಿಟಿ ರವಿ ನಗರದ ಡಿಜಿಪಿ ಕಚೇರಿಯಲ್ಲಿ ಡಿಜಿ&ಐಜಿಪಿ ಅಲೋಕ್ ಮೋಹನ್​ಗೆ ಭೇಟಿ ಮಾಡಿ ಡಿ. 19 ರಂದು ರಾತ್ರಿ ಅಕ್ರಮವಾಗಿ ಬಂಧಿಸಿ ಅಲೆದಾಡಿಸಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ. ದೂರಿನಲ್ಲಿ ಡಿಸಿಎಂ ಡಿಕೆ ಶಿವಕುಮಾರ್, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​​, ಬೆಳಗಾವಿ ನಗರ ಪೊಲೀಸ್ ಕಮಿಷನರ್​​ ಯಡಾ ಮಾರ್ಟಿನ್ ಮತ್ತು ಬೆಳಗಾವಿ ಎಸ್​ಪಿ ಭೀಮಾಶಂಕರ್ ಗುಳೇದ್ ವಿರುದ್ಧ ಆರೋಪ ಮಾಡಿದ್ದಾರೆ.

ತಮ್ಮನ್ನು ಎತ್ತಿ ಪಶುವಿನ ರೀತಿ ಕಿಡ್ನ್ಯಾಪ್ ಮಾಡಿದ್ದಾರೆಂದು ಬೆಳಗಾವಿ ಪೊಲೀಸ್​ ಕಮಿಷನರ್​, ಎಸ್​ಪಿ ವಿರುದ್ಧ ಸಿ.ಟಿ.ರವಿ ಆರೋಪ ಮಾಡಿದ್ದಾರೆ. ಇಡೀ ಸನ್ನಿವೇಶ ಫೇಕ್ ಎನ್​​ಕೌಂಟರ್ ರೀತಿ ಇತ್ತು. ಲೈಸೆನ್ಸ್ಡ್ ಸುಪಾರಿ ಕಿಲ್ಲರ್​​ಗಳ‌ ರೀತಿ ಇತ್ತು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

 


Spread the love

LEAVE A REPLY

Please enter your comment!
Please enter your name here