HomeGadag Newsಸಿಲಿಂಡರ್ ಸ್ಫೋಟದಿಂದ ಮೃತಪಟ್ಟ ಅಯ್ಯಪ್ಪ ಮಾಲಾಧಾರಿಗಳಿಗೆ ಸೂಕ್ತ ಪರಿಹಾರ ಒದಗಿಸಲು ಆಗ್ರಹ

ಸಿಲಿಂಡರ್ ಸ್ಫೋಟದಿಂದ ಮೃತಪಟ್ಟ ಅಯ್ಯಪ್ಪ ಮಾಲಾಧಾರಿಗಳಿಗೆ ಸೂಕ್ತ ಪರಿಹಾರ ಒದಗಿಸಲು ಆಗ್ರಹ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಸಿಲಿಂಡರ್ ಸ್ಫೋಟದಿಂದ 6 ಜನ ಅಯ್ಯಪ್ಪ ಮಾಲಾಧಾರಿಗಳು ಮರಣ ಹೊಂದಿದ್ದು, ಇವರ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಬೇಕೆಂದು ಸೋಮವಾರ ಶಿರಹಟ್ಟಿಯಲ್ಲಿ ಶ್ರೀ ಅಯ್ಯಪ್ಪಸ್ವಾಮಿ ಮಾಲಾಧಾರಿಗಳ ಭಕ್ತ ವೃಂದದಿಂದ ತಹಸೀಲ್ದಾರರ ಮೂಲಕ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಅಯ್ಯಪ್ಪ ಮಾಲಾಧಾರಿ ಸಂತೋಷ ಕುರಿ, ಹುಬ್ಬಳ್ಳಿಯಲ್ಲಿ ಅಯ್ಯಪ್ಪಸ್ವಾಮಿ ಸನ್ನಿಧಾನದಲ್ಲಿ ಪೂಜೆ ಮುಗಿಸಿ ಮಲಗಿದ ಸಂದರ್ಭದಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ಸ್ಥಳದಲ್ಲಿ ಮಲಗಿದ್ದ 6 ಮಾಲಾಧಾರಿ ಸ್ವಾಮಿಗಳು ಗಾಯಗೊಂಡು ಮರಣ ಹೊಂದಿದ್ದು, ಈ ಕುಟುಂಬಗಳು ತುಂಬಾ ಬಡತನದಲ್ಲಿವೆ. ಆದ್ದರಿಂದ ಪ್ರತಿ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರಧನ ಒದಗಿಸಬೇಕು, ಜೊತೆಗೆ ಧಾರ್ಮಿಕ ದತ್ತಿ ಇಲಾಖೆಯು ಸಹಾಯಧನ ನೀಡಬೇಕೆಂದು ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಹನಮಂತ ಪವಾರ, ಚಂದ್ರು ಜೋಗೇರ, ಪ್ರವೀಣ ಘಂಟಿ, ಮನೋಜ ಭಜಂತ್ರಿ, ಮಲ್ಲು ಬೋರಶೆಟ್ಟರ, ಮಲ್ಲಪ್ಪ ಕುದರಿ, ಆನಂದ ಘಂಟಿ, ಗೌಡಪ್ಪ ಪಾಟೀಲ, ಮಂಜು ಕಲಾಲ, ಪ್ರಶಾಂತ ಗಾಯಕವಾಡ, ಮಹಾಂತೇಶ ಚಲವಾದಿ ಮುಂತಾದವರು ಉಪಸ್ಥಿತರಿದ್ದರು.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img