ವಿಜಯಸಾಕ್ಷಿ ಸುದ್ದಿ, ಗದಗ: ನಮ್ಮ ನೆಲದ ಸಂಸ್ಕೃತಿ, ಸಂಸ್ಕಾರ, ಸಾಹಿತ್ಯ, ಸಂಗೀತ ಮುಂತಾದ ಕಲೆಗಳ ಬಗ್ಗೆ ಮಕ್ಕಳಲ್ಲಿ ಅಸಕ್ತಿ ಮೂಡಿಸುವ ಕೆಲಸವನ್ನು ಪಾಲಕರು ಮಾಡಬೇಕು. ಸಾಂಸ್ಕೃತಿಕ ಮನೋಭಾವ ಬೆಳೆಸುವುದರಿಂದ ಮಕ್ಕಳ ವ್ಯಕ್ತಿತ್ವ ಸರ್ವಾಂಗೀಣವಾಗಿ ರೂಪಗೊಳ್ಳುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಬಿ.ಹಿರೇಮಠ ಹೇಳಿದರು.
ಅವರು ನಗರದ ವಿಶ್ವೇಶ್ವರಯ್ಯ ಉದ್ಯಾನವನದಲ್ಲಿ ಲಕ್ಕುಂಡಿಯ ಶ್ರೀನುಲಿ ಚಂದಯ್ಯ ಜಾನಪದ ಕಲಾ ಮೇಳ ಹಾಗೂ ಕನ್ನಡ ಮತ್ತು ಸಂಸ್ಕೃತಿ ನಿರ್ದೆಶನಾಲಯ ಬೆಂಗಳೂರ ಇವರ ಸಹಯೋಗದಲ್ಲಿ ಅಯೋಜಿಸದ್ದ ಜನಪದ ಸಂಭ್ರಮ-2024 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಮೊಬೈಲ್ ಗೀಳಿನಿಂದ ಇಂದಿನ ಮಕ್ಕಳು ಚಟುವಟಿಕೆರಹಿತರಾಗುತ್ತಿದ್ದಾರೆ, ಪಾಶ್ಚಾತ್ಯ ಸಂಸ್ಕೃತಿಯತ್ತ ವಾಲುತ್ತಿದ್ದಾರೆ. ಹೀಗಾಗಿ ಮಕ್ಕಳ ಕೈಗೆ ಮೊಬೈಲ್ ಕೊಡಬೇಡಿ, ಬದಲಾಗಿ ಪುಸ್ತಕ ಓದುವ ಹವ್ಯಾಸ ಬೆಳೆಸಬೇಕು ಎಂದರು.
ಅತಿಥಿಗಳಾಗಿ ಪಾಲ್ಗೊಂಡ ವೈದ್ಯರು ಹಾಗೂ ಸಾಹಿತಿಗಳಾದ ಡಾ. ಕಲ್ಲೇಶ ದೇ.ಮೂರುಸಿಳ್ಳಿನ ಜನಪದ ಸಾಹಿತ್ಯ ಬೆಳೆದು ಬಂದ ಕುರಿತು ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ವಿಘ್ನೇಶ್ವರ ಸೇವಾ ಸಮೀತಿಯ ಅಧ್ಯಕ್ಷ ರವೀಂದ್ರರಡ್ಡಿ ಪ.ಇನಾಮತಿ ಕಾರ್ಯಕ್ರಮದ ಕುರಿತು ಮಾತನಾಡಿದರು.
ಅತಿಥಿಗಳಾಗಿ ವಿಘ್ನೇಶ್ವರ ಸೇವಾ ಸಮೀತಿಯ ಕಾರ್ಯದರ್ಶಿ ಪ್ರಕಾಶ ಬೆಂತೂರ, ಸರಕಾರಿ ನಿವೃತ್ತ ನೌಕರರಾದ ಸಂಗನಗೌಡ ಕ.ಖಂಡಪ್ಪಗೌಡ್ರ, ಜೈಶ್ರೀರಾಮ ವಾಯು ವಿಹಾರ ಸಂಘದ ಸದಸ್ಯ ಸಂಗಮೇಶ ಕಟಗೇರಿ, ವಿಘ್ನೇಶ್ವರ ದೇವಸ್ಥಾನದ ಅರ್ಚಕರಾದ ಬಸಯ್ಯಸ್ವಾಮಿ ಹಿರೇಮಠ ಉಪಸ್ಥಿತರಿದ್ದರು.
ನಂತರ ಶಿಲ್ಪಾ ಕುರಟ್ಟಿ ಮತ್ತು ತಂಡದವರಿಂದ ಸುಗಮ ಸಂಗೀತ, ಬಸವರಾಜ ಅಡವಳ್ಳಿ ಮತ್ತು ತಂಡದವರಿಂದ ವಚನ ಸಂಗೀತ, ಪ್ರಕಾಶ ಚಂದನ್ನವರ ಮತ್ತು ತಂಡದವರಿಂದ ದೀಪ ನೃತ್ಯ, ಪ್ರಕಾಶ ಕುರಬರ ಮತ್ತು ತಂಡದವರಿಂದ ಡೊಳ್ಳು ಕುಣಿತ, ಸಾವಿತ್ರಿ ಲಮಾಣಿ ಮತ್ತು ತಂಡದವರಿಂದ ಜನಪದ ಗೀತೆ, ಸೋಮು ಚಿಕ್ಕಮಠ ಮತ್ತು ತಂಡದವರಿಂದ ಲಂಬಾಣಿ ನೃತ್ಯ, ಚಿದಾನಂದ ಅನವಾಳ ಮತ್ತು ತಂಡದವರಿಂದ ಭಜನೆ, ರಾಜೇಶ್ವರಿ ಕಲಾಕುಟೀರ ಮತ್ತು ತಂಡದವರಿಂದ ಜನಪದ ನೃತ್ಯ, ಮಲ್ಲಿಕಾರ್ಜುನ ಭಜೆಂತ್ರಿ ಮತ್ತು ತಂಡದವರಿಂದ ಕರಡಿ ಮಜಲು, ಭೀಮಪ್ಪ ಭಜೆಂತ್ರಿ ಮತ್ತು ತಂಡದವರಂದ ಸಂಪುದಾಯ ವಾದನ, ಗೌಡಪ್ಪ ಬೊಮ್ಮಪ್ಪನವರ ತಂಡದವರಿಂದ ಕೋಲಾಟ, ಕೊಟ್ರೇಶ ಚನ್ನಳ್ಳಿ ತಂಡದವರಿಂದದ ಜನಪದ ಗೀತೆ, ನಿಂಗಪ್ಪ ಗುಡ್ಡದ ತಂಡದವರಿಂದ ಡೊಳ್ಳುಪದ, ಬಸವರಾಜ ಈರಣ್ಣವರ ತಂಡದವರಿಂದ ತತ್ವಪದ, ರೂಪಾಬಾಯಿ ಧಡೇದ ತಂಡದವರಿಂದ ಜನಪದ ನೃತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಸಾವಿತ್ರಿ ಲಮಾಣಿ ಪ್ರಾರ್ಥಿಸಿದರು. ಶ್ರೀನುಲಿ ಚಂದಯ್ಯ ಜಾನಪದ ಕಲಾ ಮೇಳದ ಅಧ್ಯಕ್ಷ ಶಿವು ಭಜೆಂತ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೌಡಪ್ಪ ಬೊಮ್ಮಪ್ಪವರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಪತ್ರಕರ್ತ ಹಾಗೂ ಹವ್ಯಾಸಿ ರಂಗಕಲಾವಿದ ಮೌನೇಶ ಸಿ.ಬಡಿಗೇರ (ನರೇಗಲ್ಲ) ಮಾತನಾಡಿ, ಕಲೆ, ಸಂಸ್ಕೃತಿ, ಪರಂಪರೆ ಉಳಿಸಿ-ಬೆಳೆಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ಧನ ಸಹಾಯದ ಮೂಲಕ ಕಲೆ, ಕಲಾವಿದರು ಹಾಗೂ ಸಂಘಟನೆಗಳನ್ನು ಪ್ರೋತ್ಸಾಹಿಸುತ್ತಿದೆ. ಇಲಾಖೆಯ ಯೋಜನೆಗಳನ್ನು ಪ್ರಾಮಾಣಿಕವಾಗಿ ಅನುಷ್ಠಾನಗೊಳಿಸುವ ಮೂಲಕ ಗದಗ ಜಿಲ್ಲೆಯ ಸಹಾಯಕ ನಿರ್ದೇಶಕರಾದ ವೀರಯ್ಯಸ್ವಾಮಿ ಹಿರೇಮಠರು ಕಲಾವಿದರು ಹಾಗೂ ಸಾಂಸ್ಕೃತಿಕ ಸಂಘಟಕರನ್ನು ಪ್ರೊತ್ಸಾಹಿಸುತ್ತಿದ್ದಾರೆ ಎಂದರು.