BBK11: ಇಲ್ಲಿಗೆ ಫ್ರೆಂಡ್ ಶಿಪ್ ಕಟ್: ಮಂಜು ವಿರುದ್ಧ ಸಿಡಿದೆದ್ದ ಕ್ಯಾಪ್ಟನ್ ಗೌತಮಿ!

0
Spread the love

ಬಿಗ್ ಬಾಸ್ ಸೀಸನ್ 11 ಆರಂಭಕ್ಕಿಂತಲೂ ಕಳೆದ ಎರಡ್ಮೂರು ವಾರಗಳಲ್ಲಿ ಭಾರೀ ಕುತೂಹಲ ಸೃಷ್ಟಿ ಮಾಡುತ್ತಿದೆ. ಸಾಕಷ್ಟು ಟಿಸ್ಟ್‌ಗಳನ್ನು ನೋಡಿ ಪ್ರೇಕ್ಷಕರಿಗೂ ಶೋ ರೋಚಕ ಎನಿಸುತ್ತಿದೆ. ಉಗ್ರಂ ಮಂಜು ಸ್ನೇಹಕ್ಕೆ ಮೋಕ್ಷಿತಾ ಗುಡ್‌ ಬೈ ಹೇಳಿರುವ ಬೆನ್ನಲ್ಲೇ ಈಗ ಗೌತಮಿ ಕೂಡ ಇಬ್ಬರ ಸ್ನೇಹ ಕಟ್‌ ಎಂದು ಹೇಳಿ ಶಾಕ್‌ ಕೊಟ್ಟಿದ್ದಾರೆ. ಗೆಳೆಯ-ಗೆಳತಿ ಎಂದೇ ಫೇಮಸ್ ಆಗಿದ್ದ ಗೌತಮಿ ಜಾಧವ್ ಹಾಗೂ ಮಂಜು ನಡುವೆ ಬಿರುಕು ಮೂಡಿದೆ.

Advertisement

ಇಂದು ರಾತ್ರಿ 9.30ಕ್ಕೆ ಪ್ರಸಾರವಾಗಲಿರುವ ಎಪಿಸೋಡ್​ನ ಪ್ರೊಮೋವನ್ನು ಕಲರ್ಸ್ ಕನ್ನಡ ಹಂಚಿಕೊಂಡಿದೆ. ಅದರಲ್ಲಿ ಗೌತಮಿ ಹಾಗೂ ಮಂಜು ನಡುವಿನ ಸಂಭಾಷಣೆಯನ್ನು ತೋರಿಸಲಾಗಿದೆ. ನಾನು ಕ್ಯಾಪ್ಟನ್ ಆದಾಗ ನೀವು ನನ್ನನ್ನು ಲೀಡ್ ಮಾಡಬೇಡಿ. ನಿಮ್ಮ ವೈಸ್​ನಿಂದ ನನ್ನ ಧ್ವನಿ ಕೆಳಗೆ ಹೋಗ್ತಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ನಂತರ ನಡೆದ ಟಾಸ್ಕ್​ ಮಧ್ಯದಲ್ಲಿ ಮಂಜು ಏನೋ ಹೇಳಲು ಪ್ರಯತ್ನಿಸಿದ್ದಾರೆ. ಅದಕ್ಕೆ ಕೋಪಿಸಿಕೊಂಡ ಗೌತಮಿ, ಮಂಜು ಅವರ ನಾನು 20 ಸಾರಿ ಹೇಳಲು ಸಾಧ್ಯವಿಲ್ಲ. ನೀವು ಹೇಳಿದ ಹಾಗೆ ಇಲ್ಲ ಎಂದು ಮಂಜುಗೆ ಟಾಂಟ್ ಕೊಟ್ಟಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದಿಟ್ಟಿರುವ ಗೌತಮಿ, ಕ್ಯಾಪ್ಟನ್ಸಿ ಓಟದಿಂದ ಮಂಜು ಅವರನ್ನು ಹೊರಗೆ ಇಟ್ಟಿದ್ದಾರೆ. ಇಲ್ಲಿ ಗೆಳೆಯ, ಗೆಳತನ ಇರಲ್ಲ ಅದೆಲ್ಲ ಮುಗಿಸುತ್ತ ಇದ್ದೀನಿ ಅನ್ನುವ ಮೂಲಕ ಗೌತಮಿ ಶಾಕ್ ನೀಡಿದ್ದಾರೆ.


Spread the love

LEAVE A REPLY

Please enter your comment!
Please enter your name here