ಹಾವೇರಿ: ಹಾವೇರಿ ನಗರದಲ್ಲಿ ನಡೆದ ‘ಕಲ್ಟ್’ ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ ಸಚಿವ ಜಮೀರ್ ಅಹ್ಮದ್ ಪುತ್ರ ಝೈದ್ ಖಾನ್ ಮಾತನಾಡಿದರು. ಈ ವೇಳೆ ನಟ ದರ್ಶನ್ ಕುರಿತು ಹೇಳಿಕೆ ನೀಡಿದ್ದು, ಜನವರಿಯಲ್ಲಿ ದರ್ಶನ್ ಅವರಿಗೆ ಜಾಮೀನು ಸಿಗುವ ನಿರೀಕ್ಷೆಯಿದೆ ಎಂದು ಝೈದ್ ಖಾನ್ ಹೇಳಿದರು.
ಒಂದು ವೇಳೆ ಜಾಮೀನು ಸಿಗದಿದ್ದರೆ, ನಾನೇ ಖುದ್ದು ಜೈಲಿಗೆ ಹೋಗಿ ದರ್ಶನ್ ಅಣ್ಣನಿಂದ ಆಶೀರ್ವಾದ ಪಡೆದು ಬರುತ್ತೇನೆ ಎಂದು ಝೈದ್ ಖಾನ್ ಹೇಳಿದರು. ನೋವಿನ ನಡುವೆಯೂ ದರ್ಶನ್ ಅಭಿಮಾನಿಗಳಿಗೆ ಸಕ್ಸಸ್ ಸಿನಿಮಾ ನೀಡಿರುವುದು ಅವರ ವ್ಯಕ್ತಿತ್ವದ ದೊಡ್ಡ ಗುಣವಾಗಿದೆ ಎಂದು ಪ್ರಶಂಸಿಸಿದರು.
‘ದರ್ಶನ್’ ಎಂಬ ಹೆಸರೇ ಸಿನಿಮಾ ಯಶಸ್ಸಿಗೆ ಸಾಕು. ಈ ಸಂಗತಿಯನ್ನು ‘ಡೆವಿಲ್’ ಸಿನಿಮಾ ನೋಡಿ ನಾನು ಕಲಿತಿದ್ದೇನೆ. ‘ಕಲ್ಟ್’ ಸಿನಿಮಾ ಕೂಡ ಬಹಳ ಚೆನ್ನಾಗಿ ಮೂಡಿ ಬಂದಿದೆ ಎಂದು ಝೈದ್ ಖಾನ್ ಹೇಳಿದರು. ಇನ್ನು ಸಚಿವ ಜಮೀರ್ ಅಹ್ಮದ್ ರಾಜಕೀಯ ವಿವಾದಗಳು ನಿಮ್ಮ ಸಿನಿಮಾಗೆ ಪರಿಣಾಮ ಬೀರಿದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು,
ಖಂಡಿತವಾಗಿಯೂ ಪರಿಣಾಮವಾಗಿದೆ ಎಂದು ಹೇಳಿದರು. ತಮ್ಮ ಹಿಂದಿನ ಸಿನಿಮಾಗೆ ತಂದೆಯ ರಾಜಕೀಯ ಬೆಳವಣಿಗೆಗಳಿಂದ ತೊಂದರೆಯಾಗಿದೆ. ಜಮೀರ್ ಅಹ್ಮದ್ ಅವರ ರಾಜಕೀಯ ವಿವಾದಗಳ ಕಾರಣ ತಮ್ಮ ಸಿನಿಮಾವನ್ನು ಬಾಯ್ಕಾಟ್ ಮಾಡಲಾಗಿದೆ ಎಂದು ಅವರು ಹೇಳಿದರು.



