ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ A2 ಆರೋಪಿ ಆಗಿರುವ ನಟ ದರ್ಶನ್ ಅವರು ಇತ್ತೀಚೆಗೆ ಬೇಲ್ ಮೇಲೆ ಹೊರ ಬಂದಿದ್ದಾರೆ. ಇಂದು ಅವರು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು, ಸಾಕಷ್ಟು ಅಭಿಮಾನಿಗಳು, ಸಿನಿ ಪ್ರಿಯರು ವಿಶ್ ಮಾಡುತ್ತಿದ್ದಾರೆ.
ಇನ್ನೂ ನಟ ದರ್ಶನ್ ಹುಟ್ಟುಹಬ್ಬದಂದು ಫ್ಯಾನ್ಸ್‌ಗೆ ಗುಡ್ ನ್ಯೂಸ್ ಸಿಕ್ಕಿದೆ. ದರ್ಶನ್ ಅಭಿನಯದ ‘ಡೆವಿಲ್’ ಸಿನಿಮಾದ ಟೀಸರ್ ಇಂದು ಬಿಡುಗಡೆಯಾಗಿದೆ. ಮಿಲನ ಪ್ರಕಾಶ್ ನಿರ್ದೇಶಿಸಿ ನಿರ್ಮಿಸಿರುವ ಚಿತ್ರ ಇದಾಗಿದೆ. ಫೈಟ್ ದೃಶ್ಯಗಳನ್ನೇ ಒಳಗೊಂಡಿರುವ ಟೀಸರ್ ರಿಲೀಸ್ ಆಗಿದೆ. ನನಗೇ ‘ಚಾಲೆಂಜ್’ ಎನ್ನುವಂತೆ ಡೈಲಾಗ್ ಹೊಡೆದಿರುವ ಡೆವಿಲ್, ಫ್ಯಾನ್ಸ್‌ಗೆ ಥ್ರಿಲ್ ನೀಡಿದ್ದಾರೆ.
ಇನ್ನೂ ದರ್ಶನ್ ಸಿನಿಮಾ ಜೀವನದಲ್ಲಿ ಏರಿಳಿತಗಳಿವೆ. ಸೋಲು ಗೆಲುವು ಕೂಡ ಇವೆ. ಸೋತ ಸಿನಿಮಾಗಳ ಲೆಕ್ಕ ಒಂದು ಕಡೆ ಆದ್ರೆ, ಗೆದ್ದ ಸಿನಿಮಾಗಳ ವಿಚಾರ ಮತ್ತೊಂದು ಕಡೆ ಇದೆ. ಇಂದು ದರ್ಶನ್ ಅವರಿಗೆ ಹುಟ್ಟು ಹಬ್ಬದ ಸಂಭ್ರಮ. ರಾಜ್ಯಾದ್ಯಂತ ಅವರ ಅಭಿಮಾನಿಗಳು ಡಿಬಾಸ್ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ.