ನನಗೆ ಒಂದು ಲೈಫ್ ಅಂತ ಕೊಟ್ಟಿರೋದು ದರ್ಶನ್ ಸರ್. ಅವರಿಗೆ ಬೇಲ್ ಸಿಕ್ಕ ವಿಚಾರ ತಿಳಿದು ಖುಷಿ ಆಗಿದೆ ಎಂದು ಬಿಗ್ ಬಾಸ್ ಮನೆಯಿಂದ ಹೊರ ಬಂದ ಬಳಿಕ ಧರ್ಮಕೀರ್ತಿ ಹೇಳಿದ್ದಾರೆ.
ಈ ಸಂಬಂಧ ಸಂದರ್ಶನ ಒಂದರಲ್ಲಿ ಮಾತನಾಡಿದ ಧರ್ಮಕೀರ್ತಿ, ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ಹೊರಗಿನ ವಿಚಾರ ನಮಗೆ ತಿಳಿಯುತ್ತಿರಲಿಲ್ಲ. ಮನೆಗೆ ಬಂದಾಗ ಫಸ್ಟ್ ಗುಡ್ ನ್ಯೂಸ್ ಸಿಕ್ಕಿದ್ದೇ ದರ್ಶನ್ ಸರ್‌ಗೆ ಬೇಲ್ ಆದ ವಿಚಾರ ತಿಳಿಯಿತು. ಈ ವಿಚಾರ ಕೇಳಿ ಖುಷಿಯಾಯಿತು. ಜೊತೆಗೆ ಅವರಿಗೆ ಬೆನ್ನು ನೋವಿದೆ ಆಪರೇಷನ್ ಮಾಡಬೇಕು ಎಂದಿದ್ದು ಬೇಜರಾಯಿತು.
ಅವರ ಫಾರ್ಮ್‌ಹೌಸ್‌ನಲ್ಲಿ ಕುದುರೆ ಓಡಿಸುವಾಗ ಆವಾಗಲೇ ಅವರಿಗೆ ಬೆನ್ನು ನೋವಿತ್ತು. ಸ್ಟಂಟ್ ಮಾಡುವಾಗಲೂ ಅವರಿಗೆ ಬೆನ್ನಿಗೆ ಎಷ್ಟು ನೋವಾಗುತ್ತಿತ್ತು ಎಂಬುದು ಗೊತ್ತಾಗುತ್ತಿತ್ತು. ಈ ಸಲ ಸ್ವಲ್ವ ಜಾಸ್ತಿ ಆಗಿರೋದು ಕೇಳಿ ನೋವಾಗಿದೆ. ಅವರು ಬೇಗ ಗುಣಮುಖರಾಗಲಿ ಅಂತ ಆಶಿಸುತ್ತೇನೆ ಎಂದು ಧರ್ಮ ಹೇಳಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣ ನೋಡಿದಾಗ ಕಾನೂನಿಗೆ ನಾವು ಯಾವಾಗಲೂ ತಲೆಬಾಗಲೇಬೇಕು. ಇದನ್ನು ಕೋರ್ಟ್ ನಿರ್ಧಾರ ಮಾಡುತ್ತೆ. ನನಗೆ ಒಂದು ಲೈಫ್ ಅಂತ ಕೊಟ್ಟಿರೋದು ದರ್ಶನ್ ಸರ್. ಸಿನಿಮಾರಂಗದಲ್ಲಿ ನಾನು ನಿಲ್ಲೋಕೆ ಅವರು ಕಾರಣ. ಅವರು ನನ್ನ ಶಕ್ತಿ. ನಾನು ದೇವರಲ್ಲಿ ಕೇಳಿಕೊಳ್ಳೋದು ಏನು ಅಂದರೆ ಇದೆಲ್ಲಾ ಆದಷ್ಟು ಬೇಗ ಸರಿ ಹೋಗಲಿ ಎಂದು ಧರ್ಮ ಹೇಳಿದ್ದಾರೆ.